ಕರ್ನಾಟಕ

karnataka

ETV Bharat / state

ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ: ಮತ್ತೊಂದು ವಿಡಿಯೋ ವೈರಲ್...!

ನಾಗಮಂಗಲ ತಾಲೂಕಿನಲ್ಲಿ ಪದೇ ಪದೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ರಾತ್ರೋರಾತ್ರಿ ಗ್ರಾಮಸ್ಥರು ಗುಂಪುಕಟ್ಟಿ ಸದಸ್ಯತ್ವ ಸ್ಥಾನವನ್ನು ನಡು ಬೀದಿಯಲ್ಲಿ ಹರಾಜು ಕೂಗುತ್ತಿದ್ದು, ಈ ವಿಡಿಯೋ ವೈರಲ್ ಆಗಿದೆ‌.

mandya
ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ

By

Published : Dec 12, 2020, 7:28 PM IST

ಮಂಡ್ಯ:ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ವಹಿಸಿದರೂ ಕೂಡ ಗ್ರಾಮಸ್ಥರು ಅಭಿವೃದ್ಧಿ ಎಂಬ ನೆಪ ಮಂತ್ರ ಮುಂದಿಟ್ಟುಕೊಂಡು ಕಾನೂನಿನ ಕಣ್ಣು ತಪ್ಪಿಸಿ ನಾಗಮಂಗಲ ತಾಲೂಕಿನಲ್ಲಿ ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಮತ್ತೊಂದು ವಿಡಿಯೋ ಫುಲ್ ವೈರಲ್ ಆಗಿದೆ‌.

ಗ್ರಾ.ಪಂ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ ವಿಡಿಯೋ ವೈರಲ್ ಆಗಿದೆ.

ನಾಗಮಂಗಲ ತಾಲೂಕಿನಲ್ಲಿ ಪದೇ ಪದೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಾ ರಾತ್ರೋರಾತ್ರಿ ಗ್ರಾಮಸ್ಥರು ಗುಂಪುಕಟ್ಟಿ ಸದಸ್ಯತ್ವ ಸ್ಥಾನವನ್ನು ನಡು ಬೀದಿಯಲ್ಲಿ ಹರಾಜು ಕೂಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ತಾಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಿಕೆರೆ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ನಡೆದು ರಾಜ್ಯ ಮಟ್ಟದಲ್ಲಿ ಸುದ್ದಿ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ತಾಲೂಕು ದಂಡಾಧಿಕಾರಿಗಳು ಲಾಳನಕೆರೆ ಗ್ರಾಮಕ್ಕೆ ಭೇಟಿ ನೀಡಿ ಸಂವಿಧಾನ ವಿರುದ್ಧವಾಗಿ ಹರಾಜು ಪ್ರಕ್ರಿಯೆ ನಡೆಸಬಾರದೆಂದು ಎಚ್ಚರಿಕೆ ನೀಡಿ 50 ಜನ ಗ್ರಾಮಸ್ಥರ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಓದಿ:ಮಂಡ್ಯದ ಗ್ರಾ.ಪಂ. ಸದಸ್ಯತ್ವ ಹರಾಜು ಪ್ರಕರಣ: 10 ಜನರ ವಿರುದ್ಧ ಎಫ್ಐಆರ್

ಈ ಪ್ರಕರಣ ನಡೆದ ಮೂರು ದಿನದಲ್ಲೇ ಮತ್ತೊಂದು ಹರಾಜು ಪ್ರಕರಣ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರನಹಳ್ಳಿ ಗ್ರಾಮದಲ್ಲಿ ರಾತ್ರಿ ಪ್ರವರ್ಗ- 2ಎ ಸದಸ್ಯ ಸ್ಥಾನ 5 ಲಕ್ಷ ರೂ ಹರಾಜು ಪ್ರಕ್ರಿಯೆಯಲ್ಲಿ ಮಾರಾಟಗೊಂಡಿರುವುದು ಅಚ್ಚರಿ ಮೂಡಿಸಿದೆ. ಈಗಾಗಲೇ ಇದೇ ರೀತಿ ಒಳ ಒಪ್ಪಂದ ಬಹಿರಂಗ ಹರಾಜು ಸ್ಥಳೀಯ ಹಣವಂತ ಬಲಾಢ್ಯರು ಹಾಗೂ ಬೆಂಗಳೂರು ನಿವಾಸಿಗಳು ನಾಗಮಂಗಲದ ಗ್ರಾಮ ಪಂಚಾಯಿತಿ ಸ್ಥಾನವನ್ನು ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಈಗಾಗಲೇ ಕಂಚನಹಳ್ಳಿ, ಪಾಲಾಗ್ರಾರ, ಚಿಕ್ಕೋನಹಳ್ಳಿ ಪುರ, ಚಟ್ಟೇನಹಳ್ಳಿ ಹೀಗೆ ಹಲವು ಗ್ರಾಮಗಳಲ್ಲಿ ಹರಾಜು ಪ್ರಕ್ರಿಯೆ ಮುಗಿದಿದೆ. ಬುಧವಾರ ರಾತ್ರಿಯೂ ಮಂಚೇನಹಳ್ಳಿ ಗ್ರಾಮದ ಸದಸ್ಯತ್ವ ಸ್ಥಾನ 8.40 ಲಕ್ಷಕ್ಕೆ ಹಾಗೂ ಗಂಗನಹಳ್ಳಿ ಗ್ರಾಮ ಸದಸ್ಯತ್ವ ಸ್ಥಾನ 22 ಲಕ್ಷಕ್ಕೆ ಬೆಂಗಳೂರು ನಿವಾಸಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಹರಾಜು ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಎಂಬ ಮಾಹಿತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ.

ABOUT THE AUTHOR

...view details