ಮಂಡ್ಯ: ಸಕ್ಕರೆ ಜಿಲ್ಲೆ ಗುಡ್ಡೆ ಬಾಡಿಗೆ ಫೇಮಸ್. ಗುಡ್ಡೆ ಬಾಡು ಎಂಬುದು ಗ್ರಾಮೀಣ ಶೈಲಿಯ ಪದ. ಗುಡ್ಡೆ ಮಾಂಸ ಇದು ನಗರ ಶೈಲಿಯ ಪದ. ಈ ಗುಡ್ಡೆ ಬಾಡನ್ನು ನೋಡಬೇಕು ಅಂದರೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ದೇವತೆ ಹಬ್ಬ ಆಗಬೇಕು.
ಕನ್ನಂಬಾಡಮ್ಮನಿಗೆ ಗುಡ್ಡೆ ಬಾಡು ಅರ್ಪಣೆ... ಈ ಗ್ರಾಮ ದೇವತೆ ಒಲಿಸಿಕೊಳ್ಳಲು ಮಾಂಸವೇ ಬೇಕು - kannadanews
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ಪಟ್ಟಣದಲ್ಲಿ ಕನ್ನಂಬಾಡಮ್ಮನವರ ಹಬ್ಬದ ಅಂಗವಾಗಿ ಗುಡ್ಡೆ ಬಾಡು ಹಂಚಲಾಯ್ತು.
ಮಂಡ್ಯದಲ್ಲಿ ಕನ್ನಂಬಾಡಮ್ಮನಿಗೆ ಗುಡ್ಡೆ ಬಾಡು
ಕೆ.ಆರ್. ಪೇಟೆ ಪಟ್ಟಣದಲ್ಲಿ ಕನ್ನಂಬಾಡಮ್ಮನವರ ಹಬ್ಬದ ಅಂಗವಾಗಿ ಗುಡ್ಡೆ ಬಾಡು ಭಕ್ತರ ಗಮನ ಸೆಳೆಯಿತು. ದೇವಿಯ ಮನೆತನಕ್ಕೆ ಸೇರಿದವರಿಂದ ಹಣ ಸಂಗ್ರಹ ಮಾಡಿ, ದೇವಿಗೆ ಹರಕೆ ರೂಪದಲ್ಲಿ ಬಲಿ ಕೊಟ್ಟು ಗುಡ್ಡೆ ಬಾಡನ್ನು ಹಂಚಲಾಯಿತು. ಇದಕ್ಕೂ ಮೊದಲು ತೋಟದಮ್ಮನವರ ದೇವಸ್ಥಾನದಿಂದ ತಂಬಿಟ್ಟಿನ ಆರತಿ, ಮಡೆ ಉತ್ಸವದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. ಇಂದಿನ ಆಧುನಿಕ ಭಾರತದಲ್ಲಿ ಇಂದಿಗೂ ಉಳಿದಿರುವ ಗ್ರಾಮೀಣ ಸೊಗಡು ಇದು. ಗ್ರಾಮೀಣ ಜನರ ಪ್ರೀತಿಯ "ಗುಡ್ಡೆ ಬಾಡು" ವಿತರಣೆಯನ್ನು ಕಂಡು ಜನರು ಸಂತಸ ವ್ಯಕ್ತಪಡಿಸಿದರು.
Last Updated : Jun 19, 2019, 3:46 PM IST