ಮಂಡ್ಯ: ಭಾರಿ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಎರಡು ಕಾರು, ಒಂದು ಬೈಕ್ ಜಖಂಗೊಂಡ ಘಟನೆ ನಗರದಲ್ಲಿ ನಡೆದಿದೆ.
ಮಂಡ್ಯ ಡಿಸಿ ಕಚೇರಿ ಬಳಿ ಮರದ ಕೊಂಬೆ ಬಿದ್ದು ವಾಹನಗಳು ಜಖಂ - ಮಂಡ್ಯ
ಭಾರಿ ಗಾತ್ರದ ಮರದ ಕೊಂಬೆ ಮುರಿದು ಬಿದ್ದು ಎರಡು ಕಾರು, ಒಂದು ಬೈಕ್ ಜಖಂಗೊಂಡ ಘಟನೆ ನಗರದಲ್ಲಿ ನಡೆದಿದೆ.
ಮಂಡ್ಯ
ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮರದ ಕೆಳಗೆ ಪಾರ್ಕಿಂಗ್ ಮಾಡಿ ಕೆಲಸದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದಾಗ ಘಟನೆ ನಡೆದಿದೆ.
ಇನ್ನು ನಗರಸಭೆ ಅಧಿಕಾರಿಗಳು ಮರದ ಕೊಂಬೆ ತೆರವುಗೊಳಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಅಪಾಯ ತರುವ ಮರದ ಕೊಂಬೆಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.