ಕರ್ನಾಟಕ

karnataka

ETV Bharat / state

ಮದ್ದೂರಲ್ಲಿ ರಸ್ತೆ ಮೇಲೆ ಮೊಟ್ಟೆಗಳನ್ನಿಟ್ಟ ನಾಗರಹಾವು: ನಿಬ್ಬೆರಗಾದ ಜನ

ಮದ್ದೂರಿನ ಜನನಿಬಿಡ ಪ್ರದೇಶದಲ್ಲಿ ನಾಗರಹಾವೊಂದು 12 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟ ದೃಶ್ಯವನ್ನು ನೋಡಿ ಜನರು ನಿಬ್ಬೆರಗಾದರು.

By

Published : Mar 21, 2019, 12:18 PM IST

ಮೊಟ್ಟೆಗಳನ್ನಿಡುತ್ತಿರುವ ನಾಗರಹಾವು

ಮಂಡ್ಯ: ಬೆಳ್ಳಂಬೆಳಗ್ಗೆ ವಾಕ್ ಮುಗಿಸಿ ಮನೆ ಕಡೆ ಹೊರಟಿದ್ದ ನಾಗರಿಕರಿಗೆ ಅಚ್ಚರಿ ಕಾದಿತ್ತು. ಎಂದೂ ಕಾಣದ ಆ ದೃಶ್ಯ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿತ್ತು.

ಹೌದು.., ಮದ್ದೂರಿನ ಜನನಿಬಿಡ ಪ್ರದೇಶದಲ್ಲಿ ನಾಗರಹಾವೊಂದು ಮೊಟ್ಟೆಗಳನ್ನು ಹಾಕುತ್ತಿರುವುದು ಅಚ್ಚರಿಗೆ ಕಾರಣವಾಗಿತ್ತು.

ಮೊಟ್ಟೆಗಳನ್ನಿಡುತ್ತಿರುವ ನಾಗರಹಾವು

ರಸ್ತೆಯಲ್ಲಿ ಸುಮಾರು 12ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಟ್ಟ ನಾಗರಹಾವಿನ ಆ ದೃಶ್ಯವನ್ನು ನೋಡಿ ಜನರು ನಿಬ್ಬೆರಗಾದರು.

ABOUT THE AUTHOR

...view details