ಮಂಡ್ಯ:ಶ್ರೀರಂಗಪಟ್ಟಣದಲ್ಲಿ ಗೂಸಾ ತಿಂದು ನಾಗಮಂಗಲಕ್ಕೆ ತೆರಳಿದ್ದ ಹುಚ್ಚ ವೆಂಕಟ್, ಮತ್ತೊಮ್ಮೆ ಏಟು ತಿಂದಿದ್ದಾನೆ. ತಾಲೂಕಿನ ತೊಳಲಿ ಗ್ರಾಮದ ಬಳಿ ಬುದ್ಧಿ ಹೇಳಲು ಬಂದ ವ್ಯಕ್ತಿಗೆ ವೆಂಕಟ್ ಕಪಾಳ ಮೋಕ್ಷ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಆ ವ್ಯಕ್ತಿ ಮನಸೋ ಇಚ್ಛೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗಮಂಗಲದಲ್ಲಿ ಹುಚ್ಚ ವೆಂಕಟ್ ರಂಪಾಟ: ಜನರಿಂದ ಹಿಗ್ಗಾಮುಗ್ಗ ಥಳಿತ! - ಹುಚ್ಚ ವೆಂಕಟ್ ಮೇಲೆ ಜನರಿಂದ ಹಿಗ್ಗಾಮುಗ್ಗ ಥಳಿತ
ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಹುಚ್ಚ ವೆಂಕಟ್ ಈ ಬಾರಿ ಮಂಡ್ಯದ ನಾಗಮಂಗಲದಲ್ಲಿ ರಂಪಾಟ ಮಾಡಿ, ಜನರಿಂದ ಪೆಟ್ಟು ತಿಂದಿದ್ದಾರೆ. ಸದ್ಯ ಆ ವಿಡಿಯೋ ವೈರಲ್ ಆಗಿದೆ.
ನಾಗಮಂಗಲದಲ್ಲಿ ಹುಚ್ಚ ವೆಂಕಟ್ ರಂಪಾಟ
ಸ್ಥಳದಲ್ಲಿದ್ದವರು ಬಿಡುವಂತೆ ಸಲಹೆ ನೀಡುತ್ತಿದ್ದಂತೆ ಆ ವ್ಯಕ್ತಿ ಹೊರಟು ಹೋಗಿದ್ದಾನೆ. ವೆಂಕಟ್ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಜೊತೆ ಗುದ್ದಾಟ ಮಾಡುತ್ತಿದ್ದು, ಜನರ ತಲೆನೋವಾಗಿ ಪರಿಣಮಿಸಿದ್ದಾನೆ. ಬೆಂಗಳೂರು-ಮಂಗಳೂರು ಹೈವೆಯಿಂದ ಬೆಂಗಳೂರು ಕಡೆ ತೆರಳಿದ್ದು, ಮೊದಲು ನಾಗಮಂಗಲ ಪೊಲೀಸರು ಬುದ್ಧಿ ಹೇಳಿ, ಟೀ ಕುಡಿಸಿ ಕಳುಹಿಸಿದ್ದರು. ಪೊಲೀಸರ ಬುದ್ದಿ ಮಾತು ಕೇಳದೇ ಇದೀಗ ಮತ್ತೆ ಧರ್ಮದೇಟು ತಿಂದಿದ್ದಾನೆ.