ಮಂಡ್ಯ:ಮಗ ನಿಖಿಲ್ ಪರವಾಗಿ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರಚಾರಕಲ್ಕೆ ಧುಮುಕಿದ್ದಾರೆ. ಮಹಿಳಾ ಮುಖಂಡರ ಸಭೆ ಮಾಡಿ ಪುತ್ರನ ಪರ ಮತಯಾಚಿಸಿದರು.
ನಗರದ ವರ್ಧಮಾನ್ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಟೀಕೆ, ಆರೋಪಗಳಿಗೆ ನಾವು ಉತ್ತರ ಕೊಡಲ್ಲ. ನಾವು ಬೇರೆಯವರ ಮೇಲೆ ಆರೋಪ, ಟೀಕೆ ಮಾಡಲ್ಲ. ಅಧಿಕಾರಿಗಳನ್ನ ಕೆಲಸ ಮಾಡೋಕೆ ಬಿಡಬೇಕು. ಅವರು ಒಬ್ಬರ ಪರ ಯಾಕೆ ಕೆಲಸ ಮಾಡ್ತಾರೆ. ಅವರಿಗೂ ಜವಾಬ್ದಾರಿ ಅನ್ನೋದು ಇರುತ್ತೆ. ಈ ರೀತಿ ಆರೋಪ ಯಾರೇ ಮಾಡಿದ್ರೂ ತಪ್ಪು ಎಂದು ಅಧಿಕಾರಿಗಳ ಪರ ಬ್ಯಾಟಿಂಗ್ ಬೀಸಿದರು.
ನಿಖಿಲ್ ಅಫಿಡವಿಟ್ ಗೊಂದಲ ಆರೋಪ ಕುರಿತು ಪ್ರಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಅವೆಲ್ಲ ಸುಳ್ಳು ಆರೋಪಗಳು. ಅದನ್ನೇ ಹೆಚ್ಚು ಕೆದಕೋಕೆ ಹೋಗ್ಬೇಡಿ. ಅರ್ಜಿಯಲ್ಲಿ ಎಲ್ಲವೂ ಸರಿಯಾಗಿಯೆ ಇದೆ. ಅಧಿಕಾರಿಗಳು ಸಮರ್ಥವಾಗಿದ್ದಾರೆ. ಅವರನ್ನು ಕೆಲಸ ಮಾಡೋಕೆ ಬಿಡಿ ಎಂದರು.
ನಿಖಿಲ್ ಹೆಸರು ಗೊಂದಲ ವಿಚಾರವಾಗಿ ಮಾತನಾಡಿ, ಕೆ ಅಂದ್ರೆ ಕುಮಾರಸ್ವಾಮಿ ಅಂತ. ಹಾಗಾಗಿಯೇ ನಿಖಿಲ್. ಕೆ ಎಂದು ಕೊಟ್ಟಿದ್ದೇವೆ. ಇದನ್ನು ಲಾಯರ್, ಆಡಿಟರ್ ಹೇಳಬೇಕು. ಸುಮ್ಮನೆ ಎಲ್ಲದರಲ್ಲೂ ತಪ್ಪು ಹುಡುಕುವುದು ಸರಿಯಲ್ಲ. ಮೊಸರಲ್ಲಿ ಕಲ್ಲು ಹುಡುಕುವಂತ ಕೆಲಸ ಆಗಬಾರದು.ನಾವು ಜಿಲ್ಲೆಯ ಜನಕ್ಕಾಗಿ, ಅಭಿವೃದ್ಧಿಗಾಗಿ ಮತ ಕೇಳೋಕೆ ಬಂದಿದ್ದೇವೆ. ಅವರು ಹೇಳೋದಕ್ಕೆಲ್ಲ ನೀವು ಹೆಚ್ಚು ಮಹತ್ವ ಕೊಡ್ತಿದ್ದೀರಾ ಎಂದು ಮಾಧ್ಯಮದವರ ಮೇಲೆ ಗರಂ ಆದರು.
ಜೆಡಿಎಸ್ ರೈತ ವಿರೋಧಿ ಪಕ್ಷ ಎಂಬುದನ್ನು ರೈತರು ಹೇಳಬೇಕು. ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಾಹಂ ಯಾರು?ಜನರ ಬಗ್ಗೆ ಮಾತಾಡೋಕೆಅವರಿಗೇನು ಬದ್ಧತೆ ಇದೆ ಪ್ರಶ್ನಿಸಿದರು.
ಸಿನಿಮಾ ನಟರ ಮೇಲೆ ಶಾಸಕ ಶ್ರೀನಿವಾಸ್ ವಾಗ್ದಾಳಿ:
ಸಿನಿಮಾ ನಟರು ಇವತ್ತು ಬರ್ತಾರೆ, ನಾಳೆ ಹೋಗ್ತಾರೆ. ಜಿಲ್ಲೆಯ ರೈತರ ಜೊತೆ ಇರೋರು ಕುಮಾರಸ್ವಾಮಿ. ಜಿಲ್ಲೆಯಲ್ಲಿ ಅಷ್ಟೊಂದು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸಿನಿಮಾದವ್ರು ಬಂದಿದ್ರಾ ಎಂದು ಮಂಡ್ಯ ಜೆಡಿಎಸ್ ಶಾಸಕ ಎಂ. ಶ್ರೀನಿವಾಸ್ ವಾಗ್ದಾಳಿ ನಡೆಸಿದ್ರು.