ಕರ್ನಾಟಕ

karnataka

ETV Bharat / state

ಅಕ್ಕನಿಗೆ ಕಿರುಕುಳ ಕೊಡ್ತಿದ್ದ ಭಾವನನ್ನು ಉಸಿರುಗಟ್ಟಿಸಿ ಕೊಂದ ಬಾಮೈದ - ಭಾವನ ಕೊಲೆ

ಮಂಡ್ಯದ ನಾಗಮಂಗಲ ಬಳಿ ನಡೆದ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

man Kill's His brother in Law
ಕೊಲೆಯಾದ ಪುಟ್ಟರಾಜು

By

Published : Jun 7, 2021, 1:44 PM IST

ಮಂಡ್ಯ : ಅಕ್ಕನಿಗೆ ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನೊಂದಿಗೆ ಸೇರಿ ಭಾವನನ್ನು ಬಾಮೈದನೇ ಕೊಲೆಗೈದಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಪುಟ್ಟರಾಜು (40) ಕೊಲೆಯಾದ ವ್ಯಕ್ತಿ. ಪುಟ್ಟರಾಜುವನ್ನು ಉಸಿರುಗಟ್ಟಿಸಿ ಕೊಲೆಗೈದ ಬಾಮೈದ ಮಂಜುನಾಥ್ ಮತ್ತು ಆತನ ಸ್ನೇಹಿತ ಗಂಗ ಶವವನ್ನು ರಸ್ತೆಗೆಸೆದು ಅಪಘಾತವೆಂದು ಬಿಂಬಿಸಿ, ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೂ, ಪೊಲೀಸರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾದ ಪುಟ್ಟರಾಜು

ಜೂನ್ 3 ರಂದು ಭಾವನನ್ನು ಕರಿ ಕ್ಯಾತನಹಳ್ಳಿಗೆ ಕರೆದುಕೊಂಡು ಹೋದ ಮಂಜುನಾಥ್ ಕತ್ತು ಹಿಸುಕಿ ಕೊಂದು ಶವವನ್ನು ರಸ್ತೆಗೆಸೆದು ಹೋಗಿದ್ದ. ಪೊಲೀಸರ ವಿಚಾರಣೆ ವೇಳೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದ. ಮೃತ ಮಂಜುನಾಥನ ಪೋಷಕರ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಓದಿ : ಮನೆ ಬಿಟ್ಟು ಹೋದ ಮಗಳು : ಮನನೊಂದು ತಾಯಿ ಆತ್ಮಹತ್ಯೆ

ABOUT THE AUTHOR

...view details