ಮಂಡ್ಯ:ಪಾಂಡವಪುರ ತಾಲೂಕು ವ್ಯಾಪ್ತಿಯಲ್ಲಿ ಒಮ್ಮೆಲೇ ಭಾರಿ ಶಬ್ದ ಕೇಳಿ ಬಂದ ಪರಿಣಾಮ ಜನರಲ್ಲಿ ಆತಂಕ ಮೂಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಧ್ಯಾಹ್ನ 12.45ರ ವೇಳೆ ಇದ್ದಕ್ಕಿದ್ದ ಹಾಗೆ ಈ ಶಬ್ದ ಉಂಟಾಗಿದೆ. ಯಾವ ಕಾರಣಕ್ಕೆ ಶಬ್ದ ಕೇಳಿ ಬಂದಿದೆ ಎಂದು ತಿಳಿದು ಬಂದಿಲ್ಲ. ಆದರೆ, ಈ ಬಗ್ಗೆ ಪೊಲೀಸ್ ಇಲಾಖೆ ಜೊತೆ ಸಂಪರ್ಕಿಸಿ ಮಾಹಿತಿ ನೀಡುತ್ತೇನೆ ಎಂದು ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಏಕಾಏಕಿ ಕೇಳಿ ಬಂದ ಭಾರಿ ಶಬ್ದ: ಬೆಚ್ಚಿ ಬಿದ್ದ ಮಂಡ್ಯ ಜನತೆ - ಮಂಡ್ಯ ಲೇಟೆಸ್ಟ್ ಸುದ್ದಿ
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮಧ್ಯಾಹ್ನ 12.45ರ ವೇಳೆಗೆ ಇದ್ದಕ್ಕಿದ್ದ ಹಾಗೆ ಭಾರಿ ಶಬ್ದ ಕೇಳಿ ಬಂದಿದ್ದು, ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಬೆಚ್ಚಿ ಬಿದ್ದ ಮಂಡ್ಯ ಜನತೆ
ಬೇಬಿ ಬೆಟ್ಟ, ಚಿನಕುರುಳಿ ವ್ಯಾಪ್ತಿಯ ಹಲವೆಡೆಯೂ ಶಬ್ದ ಕೇಳಿಬಂದಿದೆ. ಹೀಗಾಗಿ ಜನರು ಆತಂಕಗೊಂಡಿದ್ದಾರೆ. ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಕೇಳಿಬಂದ ಈ ಭಾರಿ ಶಬ್ದ ಅನುಮಾನಕ್ಕೆ ಕಾರಣವಾಗಿದೆ. ಕದ್ದು ಮುಚ್ಚಿ ಗಣಿಗಾರಿಕೆ ನಡೆಯುತ್ತಿದೆಯೇ ಎಂಬ ಗುಮಾನಿಯನ್ನೂ ಹುಟ್ಟುಹಾಕಿದೆ. ಈ ಹಿಂದೆ 2018ರಲ್ಲೂ ಇದೇ ರೀತಿ ಸೌಂಡ್ ಕೇಳಿ ಬಂದಿತ್ತು.
ಇದನ್ನೂ ಓದಿ:ಕಾಂಗ್ರೆಸ್ ಆಫೀಸ್ನಲ್ಲಿ ಇಂದಿರಾ ಕ್ಯಾಂಟೀನ್, ನೆಹರು ಹುಕ್ಕಾ ಬಾರ್ ಮಾಡಲಿ: ಸಿಟಿ ರವಿ
Last Updated : Aug 12, 2021, 6:35 PM IST