ಮಂಡ್ಯ:ಮಂಡ್ಯ ಮೆಡಿಕಲ್ ಕಾಲೇಜಿನ ಒಂಬತ್ತು ವಿದ್ಯಾರ್ಥಿನಿಯರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಲ್ಲಿ 6 ವಿದ್ಯಾರ್ಥಿನಿಯರು ಕೇರಳದವರಾಗಿದ್ದಾರೆ ಎಂದು ಕಾಲೇಜಿನ ನಿರ್ದೇಶಕ ಹರೀಶ್ ತಿಳಿಸಿದರು.
ಡಿಸೆಂಬರ್ 8 ರಂದು ಕೇರಳಕ್ಕೆ ತೆರಳಿ ಡಿ.4ರಂದು ಮಂಡ್ಯಕ್ಕೆ ವಾಪಸಾಗಿದ್ದ ವಿದ್ಯಾರ್ಥಿನಿಯರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಮೂವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ವಿದ್ಯಾರ್ಥಿನಿಲಯದ 145 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಮತ್ತೆ ಆರು ಮಂದಿಗೆ ಸೋಂಕು ದೃಢಪಟ್ಟಿದೆ.