ಕರ್ನಾಟಕ

karnataka

ETV Bharat / state

ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಅವರಿಗೆ ಟೆನ್ಶನ್ ಕೊಡುವುದಿಲ್ಲ: ಬಸವರಾಜ ದಡೇಸುಗೂರು - ಕೊಪ್ಪಳ ಸುದ್ದಿ

ಸಚಿವ ಸ್ಥಾನಕ್ಕಾಗಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟೆನ್ಶನ್‌ ಕೊಡುವುದಿಲ್ಲ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಹೇಳಿದ್ದಾರೆ.

Yeddyurappa does not give tension for ministerial position: Basavaraja dadesuguru
ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಅವರಿಗೆ ಟೆನ್ಷನ್ ಕೊಡುವುದಿಲ್ಲ: ಬಸವರಾಜ ದಡೇಸುಗೂರು

By

Published : Jan 24, 2020, 3:51 PM IST

ಕೊಪ್ಪಳ:ಸಚಿವ ಸ್ಥಾನಕ್ಕಾಗಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಟೆನ್ಶನ್ ಕೊಡುವುದಿಲ್ಲ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಹೇಳಿದ್ದಾರೆ.

ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಅವರಿಗೆ ಟೆನ್ಷನ್ ಕೊಡುವುದಿಲ್ಲ: ಬಸವರಾಜ ದಡೇಸುಗೂರು

ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಜಿಲ್ಲೆಯಲ್ಲಿ ಕನಕಗಿರಿ ವಿಶೇಷವಾದ ಕ್ಷೇತ್ರ. ಈ ಮಣ್ಣಿನ ಶಕ್ತಿಯಿಂದ ಇಲ್ಲಿ ಗೆದ್ದವರೂ ಮಂತ್ರಿಯಾಗಿದ್ದಾರೆ. ಆದರೆ, ನಮ್ಮ ಸಮಯ ಸ್ವಲ್ಪ-ಹೆಚ್ಚು ಕಡಿಮೆಯಾಗಿದೆ. ಈ ಬಾರಿ ಜಿಲ್ಲೆಯಲ್ಲಿ ನನಗಿಂತ ಹಿರಿಯ ಶಾಸಕರಿಬ್ಬರಿದ್ದಾರೆ. ಸಿಎಂ ಅವರು ಏನ್ ಕೆಲಸ ಕೊಟ್ಟರೂ ನಾನು ಮಾಡುತ್ತೇನೆ. ನಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಕೊಡಲು ಅವಕಾಶವಿದೆ. ನನಗೆ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಈ ವಿಷಯದಲ್ಲಿ ಮೊದಲು ಕಾಂಗ್ರೆಸ್ ಹಾಗೂ ಜೆಡಿಎಸ್​ನಿಂದ ಬಂದು ಉಪಚುನಾವಣೆಯಲ್ಲಿ ಗೆದ್ದು ಬಂದಿರುವ ಶಾಸಕರಿಗೆ ಮೊದಲು ಸಚಿವ ಸ್ಥಾನ ಕೊಡಬೇಕು ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಸೆಯನ್ನು ತೋರಿಸಿದರು.

ABOUT THE AUTHOR

...view details