ಕರ್ನಾಟಕ

karnataka

ETV Bharat / state

ಮಳೆಯಿಂದ ತುಂಬಿದ ಇಂಗು ಗುಂಡಿಗಳು: ಅಂತರ್ಜಲ ಹೆಚ್ಚಾಗಲು ವರದಾನ

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾಗಿದ್ದ ಇಂಗು ಗುಂಡಿಗಳು ವರುಣನ ಕೃಪೆಯಿಂದ ತುಂಬಿವೆ.

Trench  Full filled in kanakagiri
ಮಳೆಯಿಂದ ತುಂಬಿದ ಇಂಗುಗುಂಡಿಗಳು

By

Published : Jun 3, 2021, 3:24 PM IST

ಗಂಗಾವತಿ: ಒಂದು ಕಡೆ ಕೂಲಿಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಹೀಗಾಗಿ ಅಂತಹವರ ಕೆಲಸ ನೀಡುವುದು. ಮತ್ತೊಂದು ಕಡೆ ಗುಂಡಿಗಳನ್ನು (ಟ್ರೆಂಚ್) ನಿರ್ಮಿಸಿ ಮಳೆಗಾಲದಲ್ಲಿ ಮಳೆ ನೀರನ್ನು ಭೂಮಿಯೊಳಗೆ ಇಂಗಿಸುವ ಕಾರ್ಯಕ್ಕೆ ಇದೀಗ ಫಲ ಸಿಕ್ಕಿದೆ.

ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುಡ್ಡ ಪ್ರದೇಶದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಮಣ್ಣು ಮತ್ತು ತೇವಾಂಶ ಸಂರಕ್ಷಣೆಯ ಯೋಜನೆಯಡಿ ಅರಣ್ಯ ಇಲಾಖೆಯಿಂದ 150 ಇಂಗುಗುಂಡಿಗಳನ್ನು ನಿರ್ಮಿಸಲಾಗಿತ್ತು. ನಸುಕಿನ ಜಾವ ವೇಳೆ ಸುರಿದ ಮಳೆಯಿಂದಾಗಿ ಬಹುತೇಕ ಎಲ್ಲ ಇಂಗು ಗುಂಡಿಗಳು ಭರ್ತಿಯಾಗಿವೆ. ಇದರಿಂದ ಕೇವಲ ಅರಣ್ಯ ಪ್ರದೇಶ ಮಾತ್ರವಲ್ಲ, ಸುತ್ತಲಿನ ರೈತರ ಜಮೀನಿನಲ್ಲಿ ಅಂತರ್ಜಲ ಹೆಚ್ಚಳವಾಗುವುದಕ್ಕೆ ಅನುಕೂಲವಾಗಿದೆ.

ನರೇಗಾದಲ್ಲಿ ಕೈಗೊಳ್ಳಲಾಗಿದ್ದ ಈ ಟ್ರೆಂಚ್ ನಿರ್ಮಿಸಲು 1,210 ಮಾನವ ದಿನ ಬಳಕೆ ಮಾಡಿಕೊಂಡು 3.5 ಲಕ್ಷ ಹಣವನ್ನು ವೆಚ್ಚ ಮಾಡಲಾಗಿತ್ತು. ಇದೀಗ ಇಲಾಖೆಯ ಅಧಿಕಾರಿಗಳು ಹಾಗೂ ಕೂಲಿಕಾರರ ಶ್ರಮಕ್ಕೆ ಫಲ ಸಿಕ್ಕಂತಾಗಿದೆ.

ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದು ಸಾಬೀತಾದಲ್ಲಿ ರಾಜಕೀಯ ನಿವೃತ್ತಿ ಘೋಷಿಸುವೆ: ಖಾದರ್​

ABOUT THE AUTHOR

...view details