ಕೊಪ್ಪಳ (ಕುಷ್ಟಗಿ): ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ರೋಹಿಣಿ ಮಳೆಯಿಂದ ತಾಲೂಕಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ.
ಕುಷ್ಟಗಿಯಲ್ಲಿ ಬಿರುಗಾಳಿ ಸಹಿತ ಮಳೆಯ ಅಬ್ಬರ: ಅಪಾರ ನಷ್ಟ
ಕೊಪ್ಪಳದ ಕುಷ್ಟಗಿ ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾನದ ನಷ್ಟ ಉಂಟಾಗಿದೆ.
ಬಿರುಗಾಳಿಗೆ ಹಾರಿಹೋದ ಶಾಲೆಯ ಹಂಚುಗಳು
ಬಿರುಗಾಳಿಯ ರಭಸಕ್ಕೆ ಮನೆಯ ಹಂಚುಗಳು ಹಾರಿ ಹೋಗಿದ್ದು, ಗಿಡಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಬೆಳೆಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಬಿರುಗಾಳಿ ಬೀಸಿದೆ.
ತಾಲೂಕಿನ ಹನುಮಸಾಗರ ಗ್ರಾಮದ ಗಜೇಂದ್ರಗಡ ರಸ್ತೆಯಲ್ಲಿರುವ ಸರ್ವೋದಯ ಶಾಲೆಯ ಹಂಚು ಆ್ಯಂಗ್ಲರ್ ಸಮೇತ ಕಿತ್ತು ಹೋಗಿದೆ. ಮಾವು ಬಹುತೇಕ ಕಟಾವು ಆಗಿದ್ದರಿಂದ ರೈತರು ಆ ಸಂಕಷ್ಟದಿಂದ ಪಾರಾಗಿದ್ದಾರೆ. ಆದರೆ ಈರುಳ್ಳಿ ಬೆಳೆ, ಎಲೆ ಬಳ್ಳಿ ತೋಟಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.