ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಮಂಗಳಮುಖಿಯರಿಗೂ ನರೇಗಾ ಯೋಜನೆಯಡಿ ಕೆಲಸ

ಲಾಕ್​ಡೌನ್​ನಿಂದ ಹಾಗೂ ಕೊರೊನಾ ಹಿನ್ನೆಲೆ ತಮ್ಮ ಸ್ವಂತ ಊರುಗಳಿಗೆ ಮರಳಿದ್ದ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ಗಂಗಾವತಿಯಲ್ಲಿ ಮಂಗಳಮುಖಿಯರಿಗೂ ನರೇಗಾ ಯೋಜನೆಯಡಿ ಕೆಲಸ ನೀಡಲಾಗುತ್ತಿದ್ದು, ಅವರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಲಾಗುತ್ತಿದೆ.

Third genders got job under mnarega program in Gangavathi
ಗಂಗಾವತಿಯಲ್ಲಿ ಮಂಗಳಮುಖಿಯರಿಗೂ ನರೇಗ ಯೋಜನೆಯಡಿ ಕೆಲಸ

By

Published : Jun 3, 2020, 6:13 PM IST

ಗಂಗಾವತಿ (ಕೊಪ್ಪಳ): ಹೊಟ್ಟೆಪಾಡಿಗೆ ಗುಳೆಹೋಗಿ ಇದೀಗ ಲಾಕ್​ಡೌನ್​ ಸಡಿಲಿಕೆ ಬಳಿಕ ಗೂಡು ಸೇರಿಕೊಂಡಿರುವ ಕಾರ್ಮಿಕರಿಗಾಗಿ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೆಲಸ ನೀಡಲಾಗಿತ್ತು. ಇದೀಗ ಈ ಯೋಜನೆಯಡಿ ಮಂಗಳಮುಖಿಯರಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ನರೇಗಾದ ಮೂಲಕ ಮಂಗಳಮುಖಿಯರನ್ನು ಮುಖ್ಯ ವಾಹನಿಗೆ ತರುವ ಯತ್ನ ನಡೆದಿದೆ.

ಗಂಗಾವತಿಯಲ್ಲಿ ಮಂಗಳಮುಖಿಯರಿಗೂ ನರೇಗಾ ಯೋಜನೆಯಡಿ ಕೆಲಸ

ಕೇವಲ ಭಿಕ್ಷಾಟನೆ ಮತ್ತು ಲೈಂಗಿಕ ಅಲ್ಪಸಂಖ್ಯಾತರಾಗಿರುವ ಬಹುತೇಕ ಮಂಗಳಮುಖಿಯರಿಗೆ ನರೇಗಾದಲ್ಲಿ ಕೂಲಿಕೆಲಸ ನೀಡುವ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ.

ಕೂಲಿ ಮಾಡಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳುವಂತ ಪರಿಸರ ನಿರ್ಮಿಸಿ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಆಶಯ ಸರ್ಕಾರದ್ದು ಎಂದು ಈ ಕೆಲಸದ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯತ್​ ಇಒ ಡಾ. ಡಿ. ಮೋಹನ್ ಹೇಳಿದರು.

ABOUT THE AUTHOR

...view details