ಕುಷ್ಟಗಿ(ಕೊಪ್ಪಳ):ತಮಿಳುನಾಡಿನಿಂದ ರಾಜಸ್ಥಾನಕ್ಕೆ ಹೊರಟಿದ್ದ ರಾಜಸ್ಥಾನಿಗಳು,ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ಕೆಲಕಾಲ ಚಹಾ ಕುಡಿಯಲು ತಂಗಿದ್ದು,ಸ್ಥಳೀಯರಲ್ಲಿ ಕೊರೊನಾ ಸೋಂಕಿನ ಆತಂಕ ಹೆಚ್ಚಿಸಿದೆ.
ಕೃಷ್ಣಗಿರಿ ನಿವಾಸಿಗಳಲ್ಲಿ ಕೊರೊನಾ ಭೀತಿ ಹುಟ್ಟಿಸಿದ ರಾಜಸ್ಥಾನಿಗಳು!
ತಮಿಳುನಾಡಿನ ತಿರ್ಪುರ್ನಲ್ಲಿ ನೆಲೆಸಿದ್ದ ರಾಜಸ್ಥಾನಿಗಳು, ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ರಾಜಸ್ಥಾನಕ್ಕೆ ಮಿನಿ ಬಸ್ ಮತ್ತು ಕಾರಿನಲ್ಲಿ ಹೋಗುವ ವೇಳೆ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ರಾಜಸ್ಥಾನಿ ಮೂಲದ ಆಪ್ತರ ಮನೆಯಲ್ಲಿ ಕೆಲಕಾಲ ತಂಗಿದ್ದು,ಸ್ಥಳೀಯರು ಇದನ್ನ ಖಂಡಿಸಿದ್ದಾರೆ.
ತಮಿಳುನಾಡಿನ ತಿರ್ಪುರ್ನಲ್ಲಿ ನೆಲೆಸಿದ್ದ ರಾಜಸ್ಥಾನಿಗಳು, ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ-50ರ ಮೂಲಕ ರಾಜಸ್ಥಾನಕ್ಕೆ ಮಿನಿ ಬಸ್ ಮತ್ತು ಕಾರಿನಲ್ಲಿ ಹೋಗುವ ವೇಳೆ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯಲ್ಲಿ ರಾಜಸ್ಥಾನಿ ಮೂಲದ ಆಪ್ತರ ಮನೆಯಲ್ಲಿ ಕೆಲಹೊತ್ತು ತಂಗಿದ್ದರು. ಇದನ್ನು ಗಮನಿಸಿದ್ದ ಸ್ಥಳೀಯ, ಯುವಕರು ಸೋಂಕಿತ ಪ್ರದೇಶದಿಂದ ಬಂದು ಕಾಲೋನಿ ಪ್ರವೇಶಿಸಿದ್ದಾರೆ. ಅಲ್ಲದೆ, ಪಾಸ್ ಕೊಟ್ಟಿರುವುದು ಸಂಚರಿಸುವುದಕ್ಕೆ ಹೊರತು ಇಲ್ಲಿ ಬಂದು ವಿಶ್ರಾಂತಿ ಪಡೆಯಲಿಕ್ಕಲ್ಲ. ನೀವು ಕೊರೊನಾ ಹೈರಿಸ್ಕ್ ಪ್ರದೇಶದಿಂದ ಬಂದಿದ್ದು,ಇಲ್ಲಿ ಗ್ರೀನ್ ಝೋನ್ ಇದೆ. ಊಟ ಉಪಹಾರ ಬೇಕಾದಲ್ಲಿ ಜನವಸತಿ ಪ್ರದೇಶದಿಂದ ದೂರದಲ್ಲಿ ನಿಂತುಕೊಳ್ಳಿ. ನಿಮ್ಮವರ ಕಡೆಯಿಂದ ಪಾರ್ಸಲ್ ತರಿಸಿಕೊಳ್ಳಿ ಎಂದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣವೇ ಸ್ಥಳಕ್ಕಾಗಮಿಸಿದ ಪೋಲೀಸರು, ಅಲ್ಲಿಂದ ನಿರ್ಗಮಿಸುವಂತೆ ಸೂಚಿಸಿದರು. ರಾಜಸ್ಥಾನಿಗಳನ್ನ ಕೆಲಹೊತ್ತು ತಂಗಲು ಅವಕಾಶ ಕಲ್ಪಿಸಿದ ರಾಜಸ್ಥಾನಿ ಮೂಲದ ವ್ಯಕ್ತಿಯನ್ನ ಪೊಲೀಸ್ ಠಾಣೆ ಗೆ ಕರೆಯಿಸಿ ತಾಕೀತು ಮಾಡಲಾಯಿತು.