ಗಂಗಾವತಿ: ನಗರ ಸೇರಿ ಕನಕಗಿರಿ, ಗಂಗಾವತಿ ತಾಲೂಕಿನ ಒಂಬತ್ತು ಕುಟುಂಬಗಳನ್ನು ಜಿಲ್ಲಾಡಳಿತ ಕ್ವಾರಂಟೈನ್ಗೆ ಒಳಪಡಿಸಿದೆ. ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಮಧ್ಯರಾತ್ರಿ ಈ ಕುಟುಂಬಗಳ ವಿಳಾಸ ಪತ್ತೆ ಹಚ್ಚಿ ನೋಟಿಸ್ ಅಂಟಿಸಿದ್ದಾರೆ.
ಗಂಗಾವತಿ,ಕನಕಗಿರಿಯ 9 ಕುಟುಂಬಗಳಿಗೆ ಕ್ವಾರಂಟೈನ್.. ಮಧ್ಯರಾತ್ರಿ ನೋಟಿಸ್ ಅಂಟಿಸಿದ ಸಿಬ್ಬಂದಿ..
ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಆರೋಗ್ಯ ಇಲಾಖೆಯ ಡಿಹೆಚ್ಒ ಶರಣಪ್ಪ ನೇತೃತ್ವದಲ್ಲಿ ತೆರಳಿದ ಇಲಾಖೆಯ ಅಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳ ಕುಟುಂಬಗಳನ್ನು ಪತ್ತೆ ಮಾಡಿ ಮನೆಬಾಗಿಲಿಗೆ ಕ್ವಾರಂಟೈನ್ ನೋಟಿಸ್ ಹಚ್ಚಿದ್ದಾರೆ.
ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಆರೋಗ್ಯ ಇಲಾಖೆಯ ಡಿಹೆಚ್ಒ ಶರಣಪ್ಪ ನೇತೃತ್ವದಲ್ಲಿ ತೆರಳಿದ ಇಲಾಖೆಯ ಅಧಿಕಾರಿಗಳು ಸಂಶಯಾಸ್ಪದ ವ್ಯಕ್ತಿಗಳ ಕುಟುಂಬಗಳನ್ನು ಪತ್ತೆ ಮಾಡಿ ಮನೆಬಾಗಿಲಿಗೆ ಕ್ವಾರಂಟೈನ್ ನೋಟಿಸ್ ಹಚ್ಚಿದ್ದಾರೆ. ಇವರಲ್ಲಿ ಬಹುತೇಕರು ಸೋಂಕು ಪೀಡಿತ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದ ಹಿನ್ನೆಲೆ ಹೊಂದಿರುವ ಕಾರಣಕ್ಕೆ ಜಿಲ್ಲಾಡಳಿತ ಕಣ್ಗಾವಲಿಟ್ಟಿದೆ.
ಈ ಪೈಕಿ ಅಂಜನಾದ್ರಿ ದೇಗುಲದ ಮಾಜಿ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಕೂಡ ಹೋಂ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಮಧ್ಯರಾತ್ರಿ ಮನೆಗಳನ್ನು ಹುಡುಕಲು ಕಂದಾಯ ಸಿಬ್ಬಂದಿ ಸೈಯದ್ ಮುರ್ತುಜಾ, ಶಿವು ಹಾಗೂ ಈರಪ್ಪ ಪರದಾಡಿದರು.