ಗಂಗಾವತಿ: ಹೊಟ್ಟೆ ಪಾಡಿಗೆ ಶಿವಮೊಗ್ಗಕ್ಕೆ ದುಡಿಯಲು ಹೋಗಿ ಲಾಕ್ಡೌನ್ನಿಂದ ಸಿಲುಕಿದ್ದ ಗಂಗಾವತಿ ಮೂಲದ 8 ಮಂದಿಯನ್ನು ರಕ್ಷಿಸಿ ಸುರಕ್ಷಿತವಾಗಿ ಗಂಗಾವತಿಗೆ ಕರೆ ತರಲಾಗಿದೆ.
ಕೆಲಸಕ್ಕೆ ಹೋಗಿ ಶಿವಮೊಗ್ಗದಲ್ಲಿ ಲಾಕ್ ಆಗಿದ್ದ ಕುಟುಂಬ ರಕ್ಷಣೆ - ಲಾಕ್ಡೌನ್ಗೆ ಸಿಲುಕಿದ್ದ ಕುಟುಂಬದ ರಕ್ಷಣೆ
ಗಾರೆ ಕೆಲಸಕ್ಕೆಂದು ಗಂಗಾವತಿಯ ತೊಂಡಿಹಾಳದಿಂದ ತೆರಳಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿ 8 ಮಂದಿಯನ್ನು ಶಿವಮೊಗ್ಗದ ಗೋಪಿ ಸರ್ಕಲ್ ನಲ್ಲಿ ರಕ್ಷಿಸಲಾಗಿದೆ. ತವರಿಗೆ ಬರಲಾಗದೆ ಪರದಾಡುತ್ತಿದ್ದ ಕುಟುಂಬವನ್ನು ಶಿವಮೊಗ್ಗ ಜಿಲ್ಲಾಡಳಿತ ಗಂಗಾವತಿಗೆ ಕಲುಹಿಸಿಕೊಟ್ಟಿದೆ.
ಗಾರೆ ಕೆಲಸಕ್ಕೆಂದು ಗಂಗಾವತಿಯ ತೊಂಡಿಹಾಳದಿಂದ ತೆರಳಿದ್ದ ಕುಟುಂಬದಲ್ಲಿ ನಾಲ್ವರು ಹಿರಿಯರು ಹಾಗೂ ನಾಲ್ಕು ಮಕ್ಕಳು ಸೇರಿ ಎಂಟು ಮಂದಿ ಶಿವಮೊಗ್ಗದ ಗೋಪಿ ಸರ್ಕಲ್ನಲ್ಲಿ ಸಿಲುಕಿದ್ದರು. ತವರಿಗೆ ಬರಲಾಗದೆ ಪರದಾಡುತ್ತಿದ್ದ ಈ ಕುಟುಂಬವನ್ನು ಶಿವಮೊಗ್ಗ ಜಿಲ್ಲಾಡಳಿತ ಗಂಗಾವತಿಗೆ ಕಳುಹಿಸಿಕೊಟ್ಟಿದೆ.
ಗಂಗಾವತಿಗೆ ಆಗಮಿಸುತ್ತಿದ್ದಂತೆಯೇ ಕುಟುಂಬವನ್ನು ಪ್ರಾಥಮಿಕ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಯಾವುದೇ ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕುಟುಂಬವನ್ನು ಸುರಕ್ಷಿತವಾಗಿ ಕಾರಟಗಿ ತಾಲ್ಲೂಕಿನ ತೊಂಡಿಹಾಳ ಗ್ರಾಮಕ್ಕೆ ಆಸ್ಪತ್ರೆಯಿಂದ ಕಳುಹಿಸಲಾಯಿತು.