ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರವಿಲ್ಲದೇ ಜನ್​ಧನ್​ ಖಾತೆಯಿಂದ ಹಣ ತೆಗೆಯಲು ಮುಗಿಬಿದ್ದ ಜನ - ಹಣ ತೆಗೆಯಲು ಮುಗಿಬಿದ್ದ ಜನ

ಜನ್​ಧನ್ ಖಾತೆಗೆ ಸರ್ಕಾರ ಹಣ ಜಮೆ ಮಾಡಿದ್ದು, ಖಾತೆಯಿಂದ ಹಣ ತೆಗೆಯಲು ನಗರದ ಬಹುತೇಕ ಬ್ಯಾಂಕುಗಳ ಮುಂದೆ ಖಾತೆದಾರರು ಮುಗಿಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

rush
rush

By

Published : May 12, 2020, 3:25 PM IST

ಗಂಗಾವತಿ (ಕೊಪ್ಪಳ):ಕೊರೊನಾ ಸೋಂಕು ಹರಡುವ ಭೀತಿಯಿಂದ ಸಾರ್ವಜನಿಕ ಸ್ಥಳದಲ್ಲಿ ಓಡಾಡುವ ಜನರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಜಾರಿ ಮಾಡಿದ್ದರೂ, ನಗರದಲ್ಲಿ ಆದೇಶ ಪಾಲನೆಯಾಗದಿರುವುದು ಬೆಳಕಿಗೆ ಬಂದಿದೆ.

ಖಾತೆಯಿಂದ ಹಣ ತೆಗೆಯಲು ಮುಗಿಬಿದ್ದ ಜನ

ಕೊರೊನಾ ಹಿನ್ನೆಲೆ ಕೇಂದ್ರ ಸರ್ಕಾರ ಬಡವರು, ಕೂಲಿ ಕಾರ್ಮಿಕರಿಗೆ ಉಪಯೊಗವಾಗಲಿ ಎಂಬ ಉದ್ದೇಶದಿಂದ ಜನ್​ಧನ್ ಖಾತೆಗೆ ಹಣ ಜಮೆ ಮಾಡಿದೆ. ಆದರೆ ಖಾತೆಯಿಂದ ಹಣ ತೆಗೆಯಲು ನಗರದ ಬಹುತೇಕ ಬ್ಯಾಂಕುಗಳ ಮುಂದೆ ಖಾತೆದಾರರು ಮುಗಿಬೀಳುತ್ತಿರುವ ದೃಶ್ಯ ಕಂಡು ಬರುತ್ತಿದೆ.

ಹಣ ತೆಗೆಯಲು ಮುಗಿಬಿದ್ದ ಜನ

ಯಾವುದೇ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡದೇ ಜನ ಒಬ್ಬರ ಮೇಲೆ ಒಬ್ಬರು ಮುಗಿಬೀಳುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರತೆಗಾಗಿ ನಿಯೋಜಿಸಲಾಗುತ್ತಿರುವ ಪೊಲೀಸರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಇದ್ದರೂ ಜನರ ನಿಯಂತ್ರಣ ಸಾಧ್ಯವಾಗುತ್ತಿಲ್ಲ.

ABOUT THE AUTHOR

...view details