ಕೊಪ್ಪಳ:ಕೊರೊನಾ ಸೋಂಕಿನ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸೋಂಕಿತರ ನೆರವಿಗೆ ಹಲವರು ಕೈ ಜೋಡಿಸಿದ್ದು, ಕೆನಡಾದಲ್ಲಿರುವ ಅನಿವಾಸಿ ಭಾರತೀಯರು ಸಹಾಯದ ಹಸ್ತ ಚಾಚಿದ್ದಾರೆ.
ಜಿಲ್ಲೆಯ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯ ಮೂರು ಸಂಘ ಸಂಸ್ಥೆಗಳು 19 ಆಕ್ಸಿಜನ್ ಕಾನ್ಸನ್ಟ್ರೇಟರ್ ಕಳುಹಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೀಡಲು ಹಲವಾರು ಯಂತ್ರಗಳನ್ನು ಬಳಸಲಾಗುತ್ತಿದೆ. ಅದರಲ್ಲಿ ತಕ್ಷಣವೇ ಲಭ್ಯವಾಗುವ ಕಾನ್ಸನ್ಟ್ರೆಟರ್ಗಳಿಗೆ ಈಗ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಅಮೆರಿಕ ಹಾಗೂ ಕೆನಡಾದಲ್ಲಿರುವ ಅನಿವಾಸಿ ಭಾರತೀಯರ ಸಂಘ ಸಂಸ್ಥೆಗಳಾದ ಆಶಾ ಜ್ಯೋತಿ ಫೌಂಡೇಶನ್, ಹಾರ್ಟ್ ಆಫ್ ಇಂಡಿಯಾ, ಮಿಷನ್ ಆಕ್ಸಿಜನ್ ಸಂಸ್ಥೆಗಳಿಂದ 19 ಕಾನ್ಸನ್ಟ್ರೇಟರ್ಗಳನ್ನು ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ನೀಡಿದ್ದಾರೆ. ಇದರೊಂದಿಗೆ ಮಾಸ್ಕ್ ಹಾಗು ಸ್ಯಾನಿಟೈಸರ್ಗಳನ್ನು ಸಹ ಕಳುಹಿಸಿದ್ದಾರೆ.