ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳೋದು ಒಳ್ಳೇದು : ನಳಿನ್ ಕುಮಾರ ಕಟೀಲ್ ಲೇವಡಿ

ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ - ಅವರು ಚುನಾವಣೆ ಬಿಟ್ಟು ಜೋತಿಷ್ಯ ಹೇಳುವುದು ಉತ್ತಮ - ಪ್ರತಿಪಕ್ಷ ನಾಯಕನ ಕುರಿತು ನಳಿನ್​ ಕುಮಾರ್​ ಕಟೀಲ್​ ಲೇವಡಿ

naleen-kumar-kateel
ನಳೀನ್ ಕುಮಾರ ಕಟೀಲ್

By

Published : Feb 14, 2023, 1:20 PM IST

ನಳೀನ್ ಕುಮಾರ ಕಟೀಲ್ ಹೇಳಿಕೆ

ಕೊಪ್ಪಳ: ಸಿದ್ದರಾಮಯ್ಯ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲ. ಈ ಬಾರಿ ಅವರು ನಿರುದ್ಯೋಗಿಯಾಗುತ್ತಾರೆ ಅವರು ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳುವುದು ಉತ್ತಮ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ ಕಟೀಲ್ ಲೇವಡಿ ಮಾಡಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯ ನಾಯಕರಿಗೆ ಚುನಾವಣೆಯಲ್ಲಿ ಮತ ಕೇಳಲು ತಾಕತ್ತಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.

ರಾಜ್ಯ ಕಾಂಗ್ರೆಸ್ ನಾಯಕರಿಗೆ ಅಷ್ಟೊಂದು ತಾಕತ್ತಿದ್ದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಖರ್ಗೆ ಇವರನ್ನೆಲ್ಲ ಯಾಕೆ ರಾಜ್ಯಕ್ಕೆ ಕರೆಸುತ್ತಿದ್ದಾರೆ. ಇವರೇ ಪ್ರಚಾರ ಮಾಡಬಹುದಲ್ಲವೆ ಎಂದು ಹರಿಹಾಯ್ದರು. ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳಲಿ. ಕೋಲಾರದಿಂದ ಈಗಾಗಲೇ ಸಿದ್ದರಾಮಯ್ಯ ಅವರನ್ನು ಓಡಿಸಿದ್ದಾರೆ ಎಂದು ಹೇಳಿದರು.

ಬಾದಾಮಿಯಲ್ಲಿ ನಿಲ್ಲಲಿ, ವರುಣಾದಲ್ಲಿ ನಿಲ್ಲಲಿ.‌ ನಾವು ಸೋಲಿಸುತ್ತೇವೆಯೋ ಇಲ್ಲವೋ ನೋಡಿ. ಬಿಜೆಪಿಯವರಿಗಿಂತ ಮೊದಲು ಕಾಂಗ್ರೆಸ್​ ನವರೆ ಸಿದ್ದರಾಮಯ್ಯ ಅವರನ್ನ ಸೋಲಿಸುತ್ತಾರೆ ನೋಡುತ್ತಿರಿ ಎಂದರು. ಕೇಂದ್ರದ ಮಾಜಿ ಸಚಿವ ಕೆ ಹೆಚ್​ ಮುನಿಯಪ್ಪ ಅವರು ಈಗಾಗಲೇ ಕೋಪದಲ್ಲಿದ್ದಾರೆ. ಈ ಚುನಾವಣೆ ಅಭಿವೃದ್ಧಿಯ, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆನಡೆಯುತ್ತಿದೆ. ಜಾತಿ, ಮತ, ವೈಷಮ್ಯ ದೂರ ಮಾಡುವ ನಿಟ್ಟಿನಲ್ಲಿ ರಾಜ್ಯದ ಜನ ಯಾರಿಗೆ ಮತ ನೀಡಿದರು ಒಳಿತು ಎಂಬ ಚಿಂತನೆಯಲ್ಲಿದ್ದಾರೆ. ಹಾಗಾಗಿ ಜಾತಿ ವೈಷಮ್ಯದ ಹುಟ್ಟಿಗೆ ಕಾರಣವಾದ ಕಾಂಗ್ರೆಸ್ ಧಿಕ್ಕರಿಸಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಭವಿಷ್ಯ ನುಡಿದರು.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದ ಜನ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ. ರಾಜ್ಯಾದ್ಯಂತ ನಮ್ಮ ಈ ಯಾತ್ರೆ ನಡೆಯುತ್ತಿದ್ದು ಮುಂಬರುವ ಚುನಾವಣೆಯಲ್ಲಿ ಮತ್ತೆ ನಾವೇ ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ಪೇಜ್ ಪ್ರಮುಖ ತಂಡ ರಚನೆ ಮಾಡಲಾಗಿದ್ದು, ಉತ್ತಮ ಸಂಘಟನೆ ನಡೆಯುತ್ತಿದೆ. ಆ ಮೂಲಕ ಬಿಜೆಪಿ ಚುನಾವಣಾ ಪೂರ್ವ ತಯಾರಿ ನಡೆಸುತ್ತಿದೆ. ಇದರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ಕೆಲವು ಹಾಲಿ ಶಾಸಕರಿಗೆ ಮುಂಬರುವ ಚುನಟವಣೆಯಲ್ಲಿ ಬಿಜೆಪಿ ಟಿಕೆಟ್ ನೀಡಲ್ಲ ಎಂಬ ವಿಚಾರಕ್ಕೆ ಪ್ರತ್ರಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾವ ಕ್ಷೆತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನ ನಮ್ಮ ಪಕ್ಷದ‌ ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತದೆ. ಆ ಬೋರ್ಡ್ ಯಾರಿಗೆ ಹೇಳುತ್ತದೆಯೋ ಅವರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ಸ್ಪಷ್ಟನೆ ನೀಡಿದರು.

ಬಿಜೆಪಿ ಕಾರ್ಯಕರ್ತರು ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತ್ರಿಕ್ರಿಯಿಸಿದ ಕಟೀಲ್​, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವವರು. ಯಾರು ಯಾವ ಪಕ್ಷ ಬೇಕಾದರು ಸೇರಬಹುದು, ಬಿಡಬಹುದು ಆ ಸ್ವಾತಂತ್ರ್ಯ ನಮಗೆ ನಮ್ಮ ಸಂವಿಧಾನ ಕೊಟ್ಟಿದೆ. ಕಾರ್ಯಕರ್ತರು ಬಿಜೆಪಿ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ ಎನ್ನುವುದು ಸುಳ್ಳು. ನಮ್ಮ ಪಕ್ಷದ ಸಿದ್ದಾಂತ ಕಾರ್ಯ ವೈಖರಿಗಳನ್ನ ಮೆಚ್ಚಿ ದೇಶಾದ್ಯಂತ, ರಾಜ್ಯಾದ್ಯಂತ ಜನ ಸ್ವಯಂ ಪ್ರೇರಿತರಾಗಿ ಪಕ್ಷ ಸೇರುತ್ತಿದ್ದಾರೆ ಎಂದರು.

ಇದನ್ನೂ ಓದಿ:ಜನರು ಕೃಷ್ಣದೇವರಾಯನ ಆರಾಧಿಸ್ತಾರೆ, ಟಿಪ್ಪುವಿನ್ನಲ್ಲ: ನಳೀನ್​ ಕುಮಾರ್​ ಕಟೀಲ್​

ABOUT THE AUTHOR

...view details