ಕೊಪ್ಪಳ: ನಗರದ ಬಿಸಿಎಂ ಹಾಸ್ಟೆಲ್ನಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಐವರು ವಿದ್ಯಾರ್ಥಿಗಳಿಗೆ ಸಿಎಂ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದು, ಇಂದೇ ಪರಿಹಾರದ ಮೊತ್ತ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು.
ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿಗಳ ಸಾವು: ಕುಟುಂಬಸ್ಥರಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ - students died by shock
ವಿದ್ಯುತ್ ಅವಘಡದಲ್ಲಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಿಎಂ ಘೋಷಿಸಿರುವ 5 ಲಕ್ಷ ರೂಪಾಯಿ ಪರಿಹಾರವನ್ನು ಶೀಘ್ರ ನೀಡುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಆ. 15 ರಂದು ಧ್ವಜಾರೋಹಣ ಮಾಡಿದ್ದ ಕಂಬವನ್ನು ಇಂದು ತೆಗೆದುಕೊಂಡು ಬರಲು ಹೋದಾಗ ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್ ಅವಘಡದಿಂದ ಮಕ್ಕಳ ದೇಹ ಬೆಂದು ಹೋಗಿವೆ. ಆ ಘಟನೆ ನೋಡಿದರೆ ಕರುಳು ಕಿತ್ತು ಬರುತ್ತದೆ. ಹಾಸ್ಟೆಲ್ ಕಟ್ಟಡದ ಬಳಿಯೇ 11 ಕೆವಿ ವಿದ್ಯುತ್ ಲೈನ್ ಇದೆ. ಘಟನೆ ಸಂಬಂಧ ಹಾಸ್ಟೆಲ್ ಮೇಲ್ವಿಚಾರಕರನ್ನು ಬಂಧಿಸಲಾಗಿದ್ದು, ಹಾಸ್ಟೆಲ್ ಕಟ್ಟಡ ಮಾಲೀಕ ಹಾಗೂ ಜೆಸ್ಕಾಂ ಅಧಿಕಾರಿಗಳನ್ನು ತನಿಖೆ ಒಳಪಡಿಸಲಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಬೇಕೆಂದು ಸಂಸದ ಕರಡಿ ಆಗ್ರಹಿಸಿದರು.
ಮೂವರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಸುರಕ್ಷತೆಯ ಕ್ರಮ ಕೈಗೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.