ಕುಷ್ಟಗಿ (ಕೊಪ್ಪಳ): ರೈತರಿಗೆ ಸಂದಾಯವಾಗಬೇಕಿದ್ದ ಬೆಳೆ ಪರಿಹಾರದ ಮೊತ್ತವನ್ನು ಬೇನಾಮಿ ಖಾತೆಗೆ ವರ್ಗಾಯಿಸಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ಕರ್ನಾಟಕ ಏಕೀಕರಣ ಸಮಿತಿಯು ತಹಶೀಲ್ದಾರ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಿದೆ.
2018-19ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರವಾಗಿ ಸಂದಾಯ ಮಾಡಿರುವ ಪರಿಹಾರದಲ್ಲಿ ರೈತರಿಗೂ ಗೊತ್ತಾಗದಂತೆ ಪರಿಹಾರ ಇನ್ನೊಬ್ಬರ ಖಾತೆಗೆ ವರ್ಗಾಹಿಸಲಾಗಿದೆ.
ಈ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಶಾಮೀಲಾಗಿದ್ದು, ಸತ್ತವರ ಹೆಸರಿಗೂ ಪರಿಹಾರ ವರ್ಗಾಯಿಸಲಾಗಿದೆ. ಅರ್ಹ ರೈತರ ಖಾತೆಯ ಪರಿಹಾರ ವೆಬ್ಸೈಟ್ನಲ್ಲಿ ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ತಾಲೂಕಿನ ದೋಟಿಹಾಳ, ಕೇಸೂರು, ಮೇಗೂರು, ಮುದೇನೂರು ಗ್ರಾಮಗಳಲ್ಲಿ ಈ ರೀತಿಯಾಗಿದ್ದು, ಕೂಡಲೇ ನಡೆದಿರುವ ಅವ್ಯವಾಹರದ ತನಿಖೆ ಚುರುಕುಗೊಳಿಸಬೇಕು. ಬೇನಾಮಿ ಖಾತೆಗೆ ಜಮೆಯಾಗಿರುವ ಪರಿಹಾರದ ಮೊತ್ತವನ್ನು ಬಡ್ಡಿ ಸಮೇತ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ನವೀನಕುಮಾರ ಕೆಂಗಾರಿ, ಮಲ್ಲಿಕಾರ್ಜುನ ಅಂಗಡಿ ಒತ್ತಾಯಿಸಿದ್ದಾರೆ.