ಕುಷ್ಟಗಿ (ಕೊಪ್ಪಳ):ವಿದ್ಯಾಗಮ ಹಾಗೂ ಆನಲೈನ್ ಶಿಕ್ಷಣದಿಂದ ಶೈಕ್ಷಣಿಕ ಪ್ರಗತಿ ಏನೂ ವರ್ಕೌಟ್ ಆಗದು. ಸರ್ಕಾರ ಜನವರಿಯಿಂದ ವಿದ್ಯಾಗಮ ಬದಲಿಗೆ ಶಾಲಾ-ಕಾಲೇಜು ಆರಂಭಿಸಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ವಿದ್ಯಾಗಮ ಬದಲಿಗೆ ಶಾಲಾ-ಕಾಲೇಜು ಆರಂಭಿಸಬೇಕು: ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
ವಿದ್ಯಾಗಮ ಹಾಗೂ ಆನಲೈನ್ ಶಿಕ್ಷಣ ಕೆಲವೇ ವಿದ್ಯಾರ್ಥಿಗಳಿಗೆ ಸೀಮಿತವಾಗುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾದ್ಯತೆಗಳಿವೆ. ಹೀಗಾಗಿ ಜನವರಿಯಿಂದ ವಿದ್ಯಾಗಮ ಆರಂಭಿಸುವ ಬದಲಿಗೆ ಶಾಲಾ-ಕಾಲೇಜು ಆರಂಭಿಸುವುದೇ ಸೂಕ್ತವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜನವರಿಯಿಂದ ವಿದ್ಯಾಗಮ ಆರಂಭಿಸುವ ಬದಲಿಗೆ ಶಾಲಾ-ಕಾಲೇಜು ಆರಂಭಿಸುವುದೇ ಸೂಕ್ತವಾಗಿದೆ. ಯಾಕೆಂದರೆ ವಿದ್ಯಾಗಮ ಹಾಗೂ ಆನಲೈನ್ ಶಿಕ್ಷಣ ಕೆಲವೇ ವಿದ್ಯಾರ್ಥಿಗಳಿಗೆ ಸೀಮಿತವಾಗುತ್ತಿದ್ದು, ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾದ್ಯತೆಗಳಿವೆ. ಕೋವಿಡ್ ನಂತರ ಶೈಕ್ಷಣಿಕ ಸ್ಥಿತಿ ಹದಗೆಟ್ಟಿದ್ದು, ಸರ್ಕಾರ ಶಾಲೆ ಆರಂಭಿಸುವ ವಿಚಾರವಾಗಿ ಹಲವು ಹಂತದಲ್ಲಿ ಚರ್ಚಿಸಿದಾಗ್ಯೂ ಒಮ್ಮತದ ತೀರ್ಮಾನ ಸಾಧ್ಯವಾಗಿಲ್ಲ. ಜನರ ಅಭಿಪ್ರಾಯವೂ ಜನವರಿ ಮೊದಲ ವಾರದಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳಬೇಕು ಎನ್ನುವುದಾಗಿದೆ.
ಸರ್ಕಾರ ಈ ಕೂಡಲೇ ವಿದ್ಯಾಗಮ ಬದಲಿಗೆ ನೇರವಾಗಿ ಶಾಲಾ-ಕಾಲೇಜು ಆರಂಭಿಸಬೇಕು. ಆರಂಭಿಸಿದ ಬಳಿಕ ಏನಾದರೂ ಪರಿಣಾಮ ಕಂಡುಬಂದರೆ ಅದಕ್ಕೆ ಪರಿಹಾರ ಕಂಡುಕೊಂಡರಾಯ್ತು. ಕಾಲೇಜು ಶಿಕ್ಷಣ ಆರಂಭಿಸಿದ ಸಂದರ್ಭಗಳಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬಂದವು. ಆಗ ಸರ್ಕಾರದ ದಿಟ್ಟ ಕ್ರಮದಿಂದ ಕಾಲೇಜು ಶಿಕ್ಷಣ ಆರಂಭಿಸಲಾಗಿದೆ. ಇದಾಗಿ ತಿಂಗಳಾಯಿತು, ವ್ಯತಿರಿಕ್ತ ಪರಿಣಾಮವಾಯಿತೇ ಎಂದು ಪ್ರಶ್ನಿಸಿದ ಅವರು, ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ವಿನಂತಿಯ ಪತ್ರ ಬರೆಯುವುದಾಗಿ ತಿಳಿಸಿದರು.