ಕುಷ್ಟಗಿ (ಕೊಪ್ಪಳ): ತಾಲೂಕಿನಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇದೆ. ಕೃಷಿ ಅಧಿಕಾರಿಗಳು ಈ ಕುರಿತು ಸ್ಪಂದಿಸುತ್ತಿಲ್ಲ ಎಂದು ರೈತ ಸಂಘದ ಮುಖಂಡ ಮಲ್ಲಪ್ಪ ಹವಾಲ್ದಾರ್, ಕೃಷಿ ಸಹಾಯಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯೂರಿಯಾ ಗೊಬ್ಬರ ಅಭಾವ: ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ಸ್ವಯಂ ಬೆಳೆ ಸಮೀಕ್ಷೆಯ ಸಭೆಯಲ್ಲಿ ರೈತರು ಯೂರಿಯಾ ಗೊಬ್ಬರ ಸಮಸ್ಯೆ ಬಗೆಹರಿಸುವಂತೆ ಕೃಷಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಬೆಳೆ ಸಮೀಕ್ಷೆಯ ಸಭೆಯಲ್ಲಿ, ಫಾರ್ಮರ್ ಕ್ರಾಪ್ ಆ್ಯಪ್ ಸರ್ವೆ ಕುರಿತು ಮಾಹಿತಿ ನೀಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಕಾಟಾಪುರದ ರೈತ ಮಲ್ಲಪ್ಪ ಗೊಬ್ಬರದ ಅಭಾವ ಕುರಿತು ಪ್ರಶ್ನಿಸಿದರು.
ಯೂರಿಯಾ ಗೊಬ್ಬರ ಕೊರತೆ ಕುರಿತಂತೆ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ್ ಸಮಜಾಯಿಷಿ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ತಹಶೀಲ್ದಾರ್ ಎಂ.ಸಿದ್ದೇಶ ಪ್ರತಿಕ್ರಿಯಿಸಿ, ಗುಜಾರಾತ್ನಿಂದ 5 ಸಾವಿರ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಬರುತ್ತಿದೆ. ವಾರದ ಒಳಗಾಗಿ ವಿತರಿಸಲಾಗುವುದು. ಕಾರ್ಮಿಕರ ಕೊರತೆಯಿಂದ ವಿಳಂಬವಾಗುತ್ತಿದೆ ಎಂದು ವಿವರಿಸಿದರು.