ಕುಷ್ಟಗಿ(ಕೊಪ್ಪಳ): ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನಿರ್ಬಂಧಿತ ಅನುದಾನ ಬಳಸುವಂತಿಲ್ಲ ಎಂದು ತಾ.ಪಂ. ಇಓ ಕೆ. ತಿಮ್ಮಪ್ಪ ಹೇಳಿದರು.
ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ನಡೆದ 2010-21ನೇ ಸಾಲಿನ ಅನಿರ್ಬಂಧಿತ ಅನುದಾನದ ಕ್ರಿಯಾಯೋಜನೆ ಕುರಿತ ಸಭೆಯಲ್ಲಿ ಕ್ರಿಯಾ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಮಾಹಿತಿ ನೀಡಿದ ಅವರು, ಈ ಅನುದಾನವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುವಂತಿಲ್ಲ. ವೈಯಕ್ತಿಕ ಫಲಾನುಭವಿಗಳಿಗೆ ಗೌರವ ಧನ ನೀಡುವಹಾಗಿಲ್ಲ ಎಂದರು.
ಹಳೆ ಕಾಮಗಾರಿಗಳಿಗೆ ಈ ಅನುದಾನ ಬಳಸದೇ ಆದಷ್ಟು ಹೊಸ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು. ತಾಲೂಕಿನಲ್ಲಿ 699 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು, ಕೊಳವೆಬಾವಿ ಹಾಕಿಸುವ ಅಗತ್ಯವೇ ಬರದು. ಈ ಅನುದಾನದಲ್ಲಿ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ. ಬದಲಿಗೆ ಅರ್ಧಕ್ಕೆ ನಿಂತಿರುವ ಪೈಪಲೈನ್ ಕಾಮಗಾರಿಗೆ ಬಳಸಿಕೊಳ್ಳಲು ಸಾಧ್ಯವಿದೆ. ಶಾಲೆ, ಅಂಗನವಾಡಿ ದುರಸ್ತಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.
ಅನಿರ್ಬಂಧಿತ ಅನುದಾನವಾಗಿ ಸರ್ಕಾರದಿಂದ 2 ಕೋಟಿ ರೂ. ಮಂಜೂರಾಗಿದೆ. ಮೊದಲ ಕಂತಾಗಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಕುಡಿಯುವ ನೀರು, ಕೊರೊನಾ ಪರಿಸ್ಥಿತಿಯಲ್ಲಿ ನೈರ್ಮಲ್ಯಕ್ಕೆ ಆದ್ಯತೆ ಪ್ರಸ್ತಾಪಿಸಿ 50 ಲಕ್ಷ ರೂ.ಗಳ ಕ್ರಿಯಾಯೋಜನೆಗೆ ಸಭೆ ಸಮ್ಮತಿ ಸೂಚಿಸಿ ನಿರ್ಣಯ ಅಂಗೀಕರಿಸಿತು.
ಅನಿರ್ಬಂಧಿತ ಅನುದಾನವನ್ನು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಬಳಸುವಂತಿಲ್ಲ: ಕೆ. ತಿಮ್ಮಪ್ಪ
ಅನಿರ್ಬಂಧಿತ ಅನುದಾನವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುವಂತಿಲ್ಲ, ವೈಯಕ್ತಿಕ ಫಲಾನುಭವಿಗಳಿಗೆ ಗೌರವ ಧನವಾಗಿ ನೀಡುವ ಹಾಗಿಲ್ಲ ಎಂದು ಕುಷ್ಟಗಿ ತಾ.ಪಂ ಇಓ ಕೆ. ತಿಮ್ಮಪ್ಪ ಸ್ಪಷ್ಟಪಡಿಸಿದ್ದಾರೆ.
Kushtagi Unrestricted Grant Action Plan Meeting
ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ ಸೇರಿದಂತೆ ಮತ್ತಿತರರಿದ್ದರು.