ಕೊಪ್ಪಳ: ಯುಗಾದಿ ಪಾಡ್ಯ ಹಬ್ಬವಾದ ಇಂದು ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶವಾಗಿದೆ.
ಸೋಮೇಶ್ವರ ದೇಗುಲದ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ... ಪುಳಕಗೊಂಡ ಭಕ್ತರು - ಶಿವಲಿಂಗ
ಕೊಪ್ಪಳ ಹುಲಗಿ ಗ್ರಾಮದ ತುಂಗಭದ್ರಾ ತಟದಲ್ಲಿರುವ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶವಾಗಿದೆ. ಈ ದೃಶ್ಯಾವಳಿಯನ್ನು ಭಕ್ತರು ಕಣ್ತುಂಬಿಕೊಂಡರು.
ಶ್ರೀ ಸೋಮೇಶ್ವರ ದೇವಸ್ಥಾನ
ಹುಲಗಿ ಗ್ರಾಮದ ಬಳಿಯ ತುಂಗಭದ್ರಾ ತಟದಲ್ಲಿರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನ ವಿಜಯನಗರ ಸಾಮ್ರಾಜ್ಯದ ಅರಸರ ಆಳ್ವಿಕೆಯಲ್ಲಿ ನಿರ್ಮಾಣವಾಗಿದೆ. ಪ್ರತಿವರ್ಷ ಯುಗಾದಿಯ ಪಾಡ್ಯದ ದಿನದಂದು ಈ ಕೌತುಕ ನಡೆಯುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ಕೌತುಕ ನಡೆದಿದ್ದು, ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶಿಸುತ್ತಿದ್ದಂತೆ ಭಕ್ತರು ಪುಳಕಗೊಂಡರು.