ಕೊಪ್ಪಳ:ಹೆಂಡತಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಗಂಡನೋರ್ವ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಜಿಲ್ಲೆಯ ಚಿಕ್ಕ ಸಿಂದೋಗಿ ಗ್ರಾಮದಲ್ಲಿ ನಡೆದಿದೆ. ಚಿಕ್ಕ ಸಿಂದೋಗಿ ಗ್ರಾಮದ ಧನಗುಂಡಯ್ಯ ಅವರ ಹೆಂಡತಿ ಗವಿಸಿದ್ದಮ್ಮ ಪಕ್ಕದ ಗ್ರಾಮವಾದ ಬೇಳೂರಿನ ವೀರಯ್ಯ ಎಂಬುವನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಈ ಬಗ್ಗೆ ಗವಿಸಿದ್ದಮ್ಮನ ಮನೆಯವರಿಗೆ ವಿಷಯ ತಿಳಿದು, ಗ್ರಾಮದ ಹಿರಿಯರನ್ನ ಕರೆಯಿಸಿ ಬುದ್ಧಿ ಹೇಳಿದ್ದರು.
ಆದ್ರೂ, ಅವರಿಬ್ಬರ ನಡುವಿನ ಅನೈತಿಕ ಸಂಬಂಧ ಮುಂದುವರೆದಿತ್ತು. ಈ ಸಂಬಂಧಕ್ಕೆ ಗಂಡ ಧನಗುಂಡಯ್ಯ ಅಡ್ಡಿಯಾಗಿದ್ದಾನೆಂದು ಹೆಂಡತಿ ಗವಿಸಿದ್ದಮ್ಮ ಆಗಾಗ ನಿಂದಿಸುತ್ತಿದ್ದಳು. ಶನಿವಾರ ಮುಂಜಾನೆ ಇದೇ ವಿಷಯವಾಗಿ ಗವಿಸಿದ್ದಮ್ಮ ಮತ್ತು ಧನಗುಂಡಯ್ಯ ನಡುವೆ ಜಗಳವಾಗಿತ್ತು. ಈ ಜಗಳದಲ್ಲಿ ಬೇಳೂರಿನ ವೀರಯ್ಯನು ಭಾಗಿಯಾಗಿ ಅವಾಚ್ಯ ಪದಗಳಿಂದ ಧನಗುಂಡಯ್ಯಗೆ ನಿಂದಿಸಿದ್ದನಂತೆ.