ಕೊಪ್ಪಳ:ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಆ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿಗೆ ನಾವು ತಲೆ ಬಾಗುತ್ತೇವೆ: ಇಕ್ಬಾಲ್ ಅನ್ಸಾರಿ - ಕೊಪ್ಪಳ ಸುದ್ದಿ
ಅಯೋಧ್ಯೆ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಆ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿರುವ ಅವರು, ಸುಪ್ರೀಂಕೋರ್ಟ್ ತೀರ್ಮಾನಕ್ಕೆ ನಾವು ತಲೆ ಬಾಗುತ್ತೇವೆ. ನಮ್ಮ ದೇಶದಲ್ಲಿ ಒಂದು ವ್ಯವಸ್ಥೆ ಇದೆ. ನ್ಯಾಯಾಂಗವೇ ಅಂತಿಮ. ಅದರಲ್ಲೂ ಸುಪ್ರೀಂಕೋರ್ಟ್ ತೀರ್ಪು ಅಂತಿಮ. ಹೀಗಾಗಿ, ಸುಪ್ರೀಂ ತೀರ್ಮಾನಕ್ಕೆ ದೇಶದ ಪ್ರಜೆಗಳಾಗಿ ನಾವು ಎಲ್ಲರೂ ತಲೆ ಬಾಗುತ್ತೇವೆ. ನಮ್ಮದು ವಿವಿಧ ಧರ್ಮಗಳು ಇರುವ ಜಾತ್ಯಾತೀತ ದೇಶ.
ಇಲ್ಲಿ ಆಯಾ ಧರ್ಮದವರಿಗೆ ಅವರವರದ್ದೇ ಆದ ಪ್ರಾರ್ಥನಾ ಸ್ಥಳಗಳಿವೆ. ಎಲ್ಲರಿಗೂ ಪ್ರಾರ್ಥನಾ ಸ್ಥಳಗಳ ಅವಕಾಶವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಕಲ್ಪಿಸಿಕೊಡಬೇಕು. ಒಂದು ವೇಳೆ ಈ ಸರ್ಕಾರ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಬೇರೆ ಸರ್ಕಾರಗಳು ಬರುತ್ತವೆ. ಆಗ ಎಲ್ಲರಿಗೂ ಅವಕಾಶ ಕಲ್ಪಿಸುತ್ತವೆ ಎಂದರು.