ಕೊಪ್ಪಳ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದ್ದು, ನಗರದಲ್ಲಿ ಮತದಾರರೊಬ್ಬರು ತಮ್ಮ ವಿವಾಹದ ನಡುವೆಯೇ ಮದುವೆಯ ದಿರಿಸಿನಲ್ಲಿ ಬಂದು ಮತದಾನದ ಹಕ್ಕು ಚಲಾಯಿಸಿದರು.
ಮದುಮಗನಿಂದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತದಾನ
ರಾಜ್ಯಾದ್ಯಂತ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಮತದಾನ ಪ್ರತಿಯೊಬ್ಬರ ಹಕ್ಕು. ಈ ನಿಟ್ಟಿನಲ್ಲಿ ಶಿಕ್ಷಕನೋರ್ವ ತಮ್ಮ ಮದುವೆಯ ನಡುವೆಯೂ ವಿವಾಹದ ದಿರಿಸಿನಲ್ಲೇ ಬಂದು ಮತದಾನ ಮಾಡಿ ಗಮನ ಸೆಳೆದರು.
ಕಸಾಪ ಚುನಾವಣೆ
ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತದಾನ ಆರಂಭವಾಗಿದೆ. ಕೊಪ್ಪಳದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ವೃತ್ತಿಯಲ್ಲಿ ಶಿಕ್ಷಕರಾಗಿರುವ ಮದುಮಗ ಶೈಲಾನಿ ಭಾಷಾ ಮದುವೆ ಡ್ರೆಸ್‌ನಲ್ಲೇ ಬಂದು ವೋಟ್ ಮಾಡಿದರು. ಈ ಮೂಲಕ ಮತದಾನದ ಮಹತ್ವ ಸಾರಿದರು.
Last Updated : Nov 21, 2021, 12:19 PM IST