ಗಂಗಾವತಿ:ನಗರಸಭೆಗೆ ನ.3 ರಂದು ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹೈಡ್ರಾಮಾ ಸೃಷ್ಟಿಸುತ್ತಿದ್ದು, ಇದರಿಂದ ತಮಗೆ ಅಪಾಯ ಎದುರಾಗಿದೆ. ಸೂಕ್ತ ಆತ್ಮರಕ್ಷಣೆ ಕೊಡಿ ಎಂದು ಪಕ್ಷೇತರ ಸದಸ್ಯ ಪೊಲೀಸರ ಮೊರೆ ಹೋಗಿದ್ದಾರೆ.
ಹೈಡ್ರಾಮಾದಿಂದ ಆತಂಕ ಉಂಟಾಗಿದೆ... ರಕ್ಷಣೆ ಕೊಡಿ ಎಂದು ಪಕ್ಷೇತರ ಸದಸ್ಯ ಪೊಲೀಸರ ಮೊರೆ... - ganagavathi muncipal member sharabojirav
ಗಂಗಾವತಿಯ ನಾಲ್ಕನೇ ವಾರ್ಡ್ನ ನಗರಸಭಾ ಸದಸ್ಯ ಶರಭೋಜಿರಾವ್ ಗಾಯಕ್ವಾಡ್ ಬಿಜೆಪಿ ಹಾಗೂ ಕಾಂಗ್ರೆಸ್, ಸದಸ್ಯರನ್ನು ಅಪಹರಣ ಮಾಡುವಂತಹ ನಾಟಕೀಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ನನಗೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಶರಭೋಜಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಶರಭೋಜಿರಾವ್ ಗಾಯಕ್ವಾಡ್
ನಾಲ್ಕನೇ ವಾರ್ಡ್ನ ನಗರಸಭಾ ಸದಸ್ಯ ಶರಭೋಜಿರಾವ್ ಗಾಯಕ್ವಾಡ್ ಇದೀಗ, ಪೊಲೀಸರಿಗೆ ಮನವಿ ಸಲ್ಲಿಸಿದ್ದು ತನಗೆ ಸೂಕ್ತ ರಕ್ಷಣೆ ಕೊಡಿ ಎಂದು ಕೋರಿದ್ದಾರೆ. ನಗರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲ. ಅಧಿಕಾರಕ್ಕೆ ಏರಲು ಮತ್ತೊಬ್ಬರ ಸಹಾಯ ಎರಡೂ ಪಕ್ಷಕ್ಕೆ ಬೇಕಿದೆ.
ಈ ಹಿನ್ನೆಲೆ ಎರಡೂ ಪಕ್ಷಗಳು ಸದಸ್ಯರನ್ನು ಅಪಹರಣ ಮಾಡುವಂತಹ ನಾಟಕೀಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ನನಗೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಶರಭೋಜಿ ಪೊಲೀಸರಿಗೆ ನೀಡಿರುವ ಮನವಿಯಲ್ಲಿ ವಿವರಿಸಿದ್ದಾರೆ.