ಕರ್ನಾಟಕ

karnataka

ETV Bharat / state

ಪ್ರಾಣಿ-ಪಕ್ಷಿಗಳ ದಾಹ ನೀಗಿಸಲು ಮುಂದಾದ ಗಂಗಾವತಿ ಯುವಕರ ತಂಡ - ಕುಂಟೋಜಿ ಹಾಗೂ ಡಗ್ಗಿ ಕಾಯ್ದಿಟ್ಟ ಅರಣ್ಯ ಪ್ರದೇಶ

ಅರಣ್ಯ ಪ್ರದೇಶದಲ್ಲಿ ನೀರು ಸಂಗ್ರಹ ತೊಟ್ಟಿಗಳನ್ನು ಇಟ್ಟು ಅವುಗಳಿಗೆ ಟ್ರ್ಯಾಕ್ಟರ್ ಮೂಲಕ ನೀರು ಒಯ್ದು ತುಂಬಿಸುವ ಕೆಲಸ ಮಾಡಲಾಗಿದೆ. ಇದರಿಂದ ಅರಣ್ಯದಲ್ಲಿರುವ ನವಿಲು, ನರಿ, ತೋಳದಂತ ಪ್ರಾಣಿ ಹಾಗೂ ನಾನಾ ಬಗೆಯ ಪಕ್ಷ ಸಂಕುಲಕ್ಕೆ ನೀರಿನಾಸರೆ ಸಿಕ್ಕಂತಾಗುತ್ತದೆ.

gangavati-youths-give-driking-water-for-birds-and-animals
ಗಂಗಾವತಿ ಯುವಕರ ತಂಡ

By

Published : May 14, 2021, 9:09 PM IST

ಗಂಗಾವತಿ:ಬೇಸಿಗೆಯ ಸಂದರ್ಭದಲ್ಲಿ ಬಾಯಾರಿಕೆಯಿಂದ ಪ್ರಾಣಿ-ಪಕ್ಷಿಗಳು ಬಳಲಬಾರದು ಎಂಬ ಕಾರಣಕ್ಕೆ ಸಮಾನ ಮನಸ್ಕ ಯುವಕರು ಸೇರಿ, ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಗಂಗಾವತಿ ಯುವಕರ ತಂಡ

ಓದಿ: ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್​ಗೆ ಬೆಂಕಿ, ಮೂವರು ಜೀವಂತ ಸಮಾಧಿ, ಬದುಕುಳಿದ ಮಗು!

ಕಾರಟಗಿ ತಾಲೂಕಿನ ಸಿದ್ದಾಪುರ ಹೋಬಳಿಯ ಕುಂಟೋಜಿ ಹಾಗೂ ಡಗ್ಗಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ, ಕ್ಲೀನ್ ಅಂಡ್ ಗ್ರೀನ್ ಫೋಸರ್ ತಂಡದ ಸಮಾನ ಮನಸ್ಕ ಯುವಕರೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೈಜೋಡಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ನೀರು ಸಂಗ್ರಹ ತೊಟ್ಟಿಗಳನ್ನು ಇಟ್ಟು ಅವುಗಳಿಗೆ ಟ್ರ್ಯಾಕ್ಟರ್ ಮೂಲಕ ನೀರು ಒಯ್ದು ತುಂಬಿಸುವ ಕೆಲಸ ಮಾಡಲಾಗಿದೆ. ಇದರಿಂದ ಅರಣ್ಯದಲ್ಲಿರುವ ನವಿಲು, ನರಿ, ತೋಳದಂತ ಪ್ರಾಣಿ ಹಾಗೂ ನಾನಾ ಬಗೆಯ ಪಕ್ಷ ಸಂಕುಲಕ್ಕೆ ನೀರಿನಾಸರೆ ಸಿಕ್ಕಂತಾಗುತ್ತದೆ.

ABOUT THE AUTHOR

...view details