ಗಂಗಾವತಿ:ತಾಲೂಕಿನ ಸವುಳ ಹರಿವು ಕ್ಯಾಂಪಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಡಿ. ಮೋಹನ್ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿದರು.
ಗ್ರಾಮಕ್ಕೆ ಹೋಗಲು ಸೂಕ್ತ ರಸ್ತೆ ಇಲ್ಲದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಸುಮಾರು ಮೂರು ಕಿ.ಮೀ. ಅಂತರದಲ್ಲಿರುವ ಗ್ರಾಮಕ್ಕೆ ಕಾಲ್ನಡಿಗೆಯ ಮೂಲಕ ತೆರಳಿದರು. ಬಳಿಕ ಅಲ್ಲಿನ ಜನರೊಂದಿಗೆ ಸಭೆ ನಡೆಸಿ ಕುಂದುಕೊರತೆ ಆಲಿಸಿದರು.
2014ರಲ್ಲಿ ಆಗಿನ ಜಿಲ್ಲಾಧಿಕಾರಿ ಕೆ. ಸತ್ಯಮೂರ್ತಿ ಭೇಟಿ ನೀಡಿದ್ದು ಬಿಟ್ಟರೆ, ಇದುವರೆಗೂ ಯಾವೊಬ್ಬ ಅಧಿಕಾರಿ ಬಂದಿಲ್ಲ. ಮೊದಲ ಬಾರಿಗೆ ತಾಲೂಕು ಹಂತದ ಅನುಷ್ಠಾನ ಅಧಿಕಾರಿ ಬಂದಿರುವುದು ಸಂತಸ ತಂದಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು.
ಸವುಳ ಗ್ರಾಮಕ್ಕೆ ಇಓ ಭೇಟಿ, ಗ್ರಾಮಸ್ಥರ ಕುಂದು ಕೊರತೆ ಆಲಿಸಿದ ಅಧಿಕಾರಿ ತಾಲೂಕಿನ ಆಗೋಲಿ ಗ್ರಾಮ ಪಂಚಾಯತ್ನಲ್ಲಿದ್ದರೂ ಅಜ್ಞಾತವಾಗಿರುವ ಈ ಗ್ರಾಮಸ್ಥರು ಕುಡಿಯುವ ನೀರು, ರಸ್ತೆ, ವಿದ್ಯುತ್, ಶೌಚಾಲಯ, ವಸತಿಯಂತಹ ಅಗತ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಮಾಹಿತಿ ನೀಡಿದರು.
ಎಲ್ಲವನ್ನು ಪಟ್ಟಿ ಮಾಡಿಕೊಂಡ ಇಓ, ನರೇಗಾ ಯೋಜನೆಯಡಿ ಕೆಲಸ ಮಾಡಿ, ನೂರು ದಿನದ ಕೂಲಿ ಸಿಗುತ್ತದೆ. ಬಳಿಕ ಎಲ್ಲಾ ಸೌಲಭ್ಯಗಳ ಬಗ್ಗೆ ಗಮನ ಹರಿಸುವೆ ಎಂದು ಇಓ ಭರವಸೆ ನೀಡಿದರು.