ಕರ್ನಾಟಕ

karnataka

ETV Bharat / state

ಹಾಸ್ಯ ಕಲಾವಿದ ಪ್ರಾಣೇಶ್​ ಮನೆ ಬಳಿ ಆತಂಕ ಸೃಷ್ಟಿಸಿದ ನೂರು ರೂ. ನೋಟುಗಳು... ಬೆಚ್ಚಿಬಿದ್ದ ಗಂಗಾವತಿ ಜನ - ಕೊರೊನಾ

ಹಾಸ್ಯ ಕಲಾವಿದ ಪ್ರಾಣೇಶ್​ ಮನೆ ಬಳಿ ಅಪರಿಚಿತರು ರಸ್ತೆಯಲ್ಲಿ ನೂರು ರೂ. ಮುಖಬೆಲೆಯ ಮೂರು ನೋಟುಗಳನ್ನು ಎಸೆದಿದ್ದು, ಇದನ್ನು ಕಂಡ ಗಂಗಾವತಿ ನಗರ ನಿವಾಸಿಗಳು ಆತಂಕಗೊಂಡಿದ್ದಾರೆ.

found 3 hundreds currency notes in gangavati
ಅಂದು 10 ರೂ. ಇಂದು 100 ರೂ : ನೋಟು ನೋಡಿ ಬೆಚ್ಚಿ ಬಿದ್ರು ಜನ

By

Published : Apr 21, 2020, 9:16 AM IST

Updated : Apr 21, 2020, 9:27 AM IST

ಗಂಗಾವತಿ: ಬೆಳಂಬೆಳಗ್ಗೆ ರಸ್ತೆಯಲ್ಲಿ ನೂರು ರೂ. ನೋಟುಗಳನ್ನು ಕಂಡು ಜನ ಬೆಚ್ಚಿ ಬಿದ್ದ ಘಟನೆ ಇಲ್ಲಿನ ಜಯನಗರದ ಮೊದಲ ಹಂತದ ಮೂರನೇ ತಿರುವಿನಲ್ಲಿ ನಡೆದಿದೆ.

ಹಾಸ್ಯ ಮಾತುಗಾರ ಬಿ. ಪ್ರಾಣೇಶ ಅವರ ನಿವಾಸದ ಸಮೀಪ ಇರುವ ಉದ್ಯಮಿ ವಿ.ಕೆ. ಗುಪ್ತ ಎಂಬುವವರ ಮನೆ ಬಳಿ ಈ ಘಟನೆ ನಡೆದಿದ್ದು, ಅಪರಿಚಿತರು ನೂರು ರೂಪಾಯಿ ಮುಖ ಬೆಲೆಯ ಒಟ್ಟು ಐದು ನೋಟುಗಳನ್ನು ಎಸೆದು ಹೋಗಿದ್ದಾರೆ.

ನೋಟುಗಳ ಪರಿಶೀಲನೆ

ಮೊನ್ನೆಯಷ್ಟೆ ಬಸವಣ್ಣ ವೃತ್ತದ ಹೇರೂರು ಓಣಿಯಲ್ಲಿ ಹತ್ತು ರೂಪಾಯಿ ಮುಖಬೆಲೆಯ ನೋಟುಗಳನ್ನು ಎಸೆದು ಹೋಗಿದ್ದರು. ಇದೀಗ ನೂರರ ನೋಟು ಕಂಡ ಜನ ಭಯಭೀತರಾಗಿದ್ದಾರೆ.

ನೋಟು ಎಸೆದಿರುವ ಅವರಿಚಿತರು

ಕೊರೊನಾದಂತ ವಿಪತ್ತಿನ ಸಂದರ್ಭದಲ್ಲಿ ಅಪರಿಚಿತರು ಎಸಗುತ್ತಿರುವ ಇಂತಹ ಕೃತ್ಯಗಳಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ನೋಟುಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡರು.

Last Updated : Apr 21, 2020, 9:27 AM IST

ABOUT THE AUTHOR

...view details