ಕರ್ನಾಟಕ

karnataka

ETV Bharat / state

ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೇ ಪೌರತ್ವ ಕಾನೂನು ಜಾರಿ: ಇಕ್ಬಾಲ್ ಅನ್ಸಾರಿ

ಕೇಂದ್ರ ಸರ್ಕಾರ ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಪೌರತ್ವ ಜಾರಿಗೆ ತಂದಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದರು.

Former Minister Iqbal Ansari
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

By

Published : Jan 6, 2020, 4:57 PM IST

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದರು.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸುದ್ದಿಗೋಷ್ಠಿ

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಅವರು ಶಾಸಕರಾಗಿ ಕಾನೂನಿನ ಚೌಕಟ್ಟಿನಲ್ಲಿ ಮಾತನಾಡಬೇಕು. ಅವರು ಮಾತನಾಡಿದ್ದನ್ನು ನೋಡಿದರೆ ಅವರ ಮಾನಸಿಕ ಸ್ಥಿತಿ ಅರ್ಥವಾಗುತ್ತದೆ. ಸೋಮಶೇಖರ ರೆಡ್ಡಿ ಅಂತವರಿಂದ ರಾಜಕೀಯದಲ್ಲಿ ಒಳ್ಳೆಯ ಕೆಲಸ ಮಾಡುವವರ ಮರ್ಯಾದೆ ಹೋಗ್ತಿದೆ. ಖಡ್ಗ ಹಿಡಿದೀವಿ ಎಂದು ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಬೇರೆಯವರೇನು ಬಳೆ ಹಾಕಿಕೊಂಡಿದ್ದಾರಾ? ನಮ್ಮ ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಅಂತ ಮಾಡಿದೀರಾ ಎಂದು ಅನ್ಸಾರಿ ಪ್ರಶ್ನಿಸಿದರು.

ಇನ್ನು ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಪೌರತ್ವ ಜಾರಿಗೆ ತಂದಿದ್ದಾರೆ. ಮೊದಲು ತ್ರಿವಳಿ ತಲಾಖ್ ಬಗ್ಗೆ ಕಾನೂನು ತಂದರು. ಗಂಡ ಜೈಲಿಗೆ ಹೋದರೆ ಅವಳು ಎಲ್ಲಿ ಹೋಗಬೇಕು.ಅನಗತ್ಯವಾಗಿ ಮುಸ್ಲಿಂ‌ ಸಮುದಾಯಕ್ಕೆ ತೊಂದರೆ ಕೊಡಲೆಂದೆ ಕಾಯ್ದೆ ಜಾರಿಗೆ ತಂದಿದ್ದಾರೆ. ನನ್ನ ಪೌರತ್ವ ಕಸಿದುಕೊಳ್ಳಲು ಇವರು ಯಾರು? ನಾನು ಹುಟ್ಟಿದಾಗ ಹೆರಿಗೆಯನ್ನು ದಾದಿಗಳು ಮಾಡಿಸಿದ್ದಾರೆ. ನಾವೆಲ್ಲಿಂದ ಸರ್ಟಿಫಿಕೇಟ್ ತರೋಣ ಎಂದು ಪ್ರಶ್ನಿಸಿದರು.

ಹಾಗೆ ರಾಮಮಂದಿರ ವಿಷಯದಲ್ಲಿ ಮುಸ್ಲಿಂ ಸಮುದಾಯ ಸುಮ್ಮನಿತ್ತು. ನಮಗೆ ತ್ರಿವಳಿ ತಲಾಖ್ ಬೇಕಾಗಿರಲಿಲ್ಲ. ಮುಸ್ಲಿಂರನ್ನು ಸೆದೆಬಡೆಯಲು ಕಾನೂನು ಜಾರಿ ಮಾಡಲಾಗಿದೆ. ಇದು ಮೋದಿ ದೇಶವಲ್ಲ, ನಮ್ಮ ದೇಶ. ಮೋದಿ ದೇಶಕ್ಕಾಗಿ ಹೋರಾಟ‌ ಮಾಡಿಲ್ಲ. ನಮ್ಮ ಪೂರ್ವಜರು ಹೋರಾಟ ಮಾಡಿದ್ದಾರೆ. ಮುಸ್ಲಿಂರೇನು ಕುರಿಗಳಾ? ಎಂದು ಪ್ರಶ್ನಿಸಿದರು.

ABOUT THE AUTHOR

...view details