ಗಂಗಾವತಿ (ಕೊಪ್ಪಳ):ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪುಣ್ಯ ಕ್ಷೇತ್ರವಾದ ಅಂಜನಾದ್ರಿ ಬೆಟ್ಟಕ್ಕೆ ಹನುಮಂತ ದೇವರ ದರ್ಶನಕ್ಕೆಂದು ಬಂದ ಹಲವರು ದಂಡ ಕಟ್ಟುವ ಪರಿಸ್ಥಿತಿ ಎದುರಾಯಿತು.
ದೇವರ ದರ್ಶನಕ್ಕೆಂದು ಅಂಜನಾದ್ರಿ ಬೆಟ್ಟಕ್ಕೆ ಬಂದವರಿಗೆ ಶಾಕ್! - social distancing
ಸಾಮಾಜಿಕ ಅಂತರ ಪಾಲನೆ, ಕಡ್ಡಾಯ ಮಾಸ್ಕ್ ಧರಿಸುವ ಆದೇಶ ಜಾರಿಯಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಆದೇಶ ಮೀರಿದ ಜನರಿಗೆ ತಲಾ ಇನ್ನೂರು ರೂಪಾಯಿ ದಂಡ ಹಾಕಿದರು.
anjanadri
ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜಿಲ್ಲಾಧಿಕಾರಿ ಸಾಮಾಜಿಕ ಅಂತರ ಪಾಲನೆ, ಕಡ್ಡಾಯ ಮಾಸ್ಕ್ ಧರಿಸುವ ಆದೇಶ ಜಾರಿ ಮಾಡಿದ್ದಾರೆ. ಮಾಸ್ಕ್ ಇಲ್ಲದೇ ಓಡಾಡುವವರಿಗೆ ದಂಡ ಹಾಕುವಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆ ಹನುಮನಹಳ್ಳಿ ಸಮೀಪ ಇರುವ ಅಂಜನಾದ್ರಿ ದೇಗಲು ಸಮೀಪ ತಾಲೂಕು ಪಂಚಾಯಿತಿ ಇಒ ಮೋಹನ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ಮಾಡಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಜನರಿಗೆ ತಲಾ ಇನ್ನೂರು ರೂಪಾಯಿ ದಂಡ ಹಾಕಿದರು.