ಗಂಗಾವತಿ:ಕೋವಿಡ್ ಕಾರಣಕ್ಕೆ ದೀರ್ಘ ಕಾಲ ಮುಚ್ಚಿದ್ದ ಹಾಗೂ ಚಿರತೆಗಳ ಹಾವಳಿಯಿಂದ ಸಮಯದ ಅವಧಿ ಕಡಿತವಾಗಿದ್ದ ತಾಲೂಕಿನ ಅಂಜನಾದ್ರಿಯ ಆಂಜನೇಯ ದೇಗುಲದ ಸಮಯವನ್ನು ವಿಸ್ತರಿಸಿ ಆಡಳಿತಾಧಿಕಾರಿ ಆದೇಶ ಮಾಡಿದ್ದಾರೆ.
ಅಂಜನಾದ್ರಿ ದೇಗುಲದ ದರ್ಶನ ಸಮಯ ವಿಸ್ತರಣೆ: ತಹಶೀಲ್ದಾರ್ ಆದೇಶ
ದೇಗುಲದ ಕಾರ್ಯನಿರ್ವಾಹಕ ಹಾಗೂ ಆಡಳಿತಾಧಿಕಾರಿಯಾಗಿರುವ ಗಂಗಾವತಿ ತಹಶೀಲ್ದಾರ್ ವಿ. ನೇಗಿ, ದೇಗುಲದ ಸಮಯವನ್ನು ಈಗಿರುವ ಮಧ್ಯಾಹ್ನದ ಮೂರು ಗಂಟೆಯ ಬದಲಿಗೆ ಸಂಜೆ ಐದು ಗಂಟೆವರೆಗೂ ವಿಸ್ತರಿಸಿದ್ದಾರೆ.

ಬೆಳಗ್ಗೆ ಏಳು ಗಂಟೆಯಿಂದ ಸಂಜೆ ಐದು ಗಂಟೆವರೆಗೂ ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ದೇಗುಲದ ದರ್ಶನ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಸಮಯವನ್ನು ಮತ್ತಷ್ಟು ವಿಸ್ತರಿಸುವ ಅವಕಾಶಗಳಿವೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.