ಕರ್ನಾಟಕ

karnataka

ಸೀಲ್​ಡೌನ್ ಏರಿಯಾಗಳಲ್ಲಿ ಈಗ ಗ್ರಾಮ ಸಿಂಹಗಳದ್ದೇ ಕಾರುಬಾರು !!

By

Published : Jul 12, 2020, 9:27 PM IST

ಕೊರೊನಾ ಭೀತಿ ಎಲ್ಲೆಡೆ ಆವರಿಸುತ್ತಿದೆ. ಜನ ಮನೆಯಿಂದ ಹೊರಕ್ಕೆ ಬರಲು ಹೆದರುವ ಸ್ಥಿತಿ ಇದೆ. ಇನ್ನು ಪಾಸಿಟಿವ್ ಬಂದ ಏರಿಯಾಗಳಲ್ಲಿ ಅಧಿಕಾರಿಗಳು ಸೀಲ್​ಡೌನ್ ಮಾಡುತ್ತಿದ್ದು, ಜನ ಸಂಚಾರ ವಿರಳವಾಗುತ್ತಿದೆ. ಆದರೆ ಇದೀಗ ಸೀಲ್​ಡೌನ್ ಏರಿಯಾಗಳಲ್ಲಿ ಗ್ರಾಮ ಸಿಂಹಗಳದ್ದೇ ಕಾರುಬಾರು.

Dogs
ನಾಯಿಗಳು

ಗಂಗಾವತಿ (ಕೊಪ್ಪಳ): ಕೊರೊನಾ ಭೀತಿ ಎಲ್ಲೆಡೆ ಆವರಿಸುತ್ತಿದೆ. ಜನ ಮನೆಯಿಂದ ಹೊರಕ್ಕೆ ಬರಲು ಹೆದರುವ ಸ್ಥಿತಿ ಇದೆ. ಇನ್ನು ಪಾಸಿಟಿವ್ ಬಂದ ಏರಿಯಾಗಳಲ್ಲಿ ಅಧಿಕಾರಿಗಳು ಸೀಲ್​ಡೌನ್​ ಮಾಡುತ್ತಿದ್ದು, ಜನ ಸಂಚಾರ ವಿರಳವಾಗುತ್ತಿದೆ. ಆದರೆ ಇದೀಗ ಸೀಲ್​ಡೌನ್ ಏರಿಯಾಗಳಲ್ಲಿ ಗ್ರಾಮ ಸಿಂಹಗಳದ್ದೇ ಕಾರುಬಾರು ಎಂಬಂತಾಗಿದೆ.

ಕೊರೊನಾ ಸೀಲ್​ಡೌನ್ ಏರಿಯಾದಲ್ಲಿ ನಾಯಿಗಳು

ಹೌದು.. ನಗರದ ಬಹುತೇಕ ಸೀಲ್​ಡೌನ್ ಪ್ರದೇಶದಲ್ಲಿ ಜನ, ವಾಹನ ಸಂಚಾರ ಸಂಪೂರ್ಣ ನಿಷೇಧವಾಗಿದೆ. ಆದರೆ ಗ್ರಾಮ ಸಿಂಹ ಎಂದು ಕರೆಯಿಸಿಕೊಳ್ಳುವ ಮಾನವನ ಅನಾದಿ ಕಾಲದ ನಂಬಿಕಸ್ಥ ಪ್ರಾಣಿ ನಾಯಿಗಳು ಮಾತ್ರ ಯಾರ ಹಂಗಿಲ್ಲದೇ ಓಡಾಡುತ್ತಿವೆ.

ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಪಕ್ಕದ ವಿವೇಕಾನಂದ ಕಾಲೋನಿಯಲ್ಲಿನ ನಿವಾಸಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಏರಿಯಾವನ್ನು ಸಂಪೂರ್ಣ ಸೀಲ್​ಡೌನ್ ಮಾಡಲಾಗಿದೆ. ಆದರೆ ಈಗ ಈ ಪ್ರದೇಶಗಳಲ್ಲಿ ನೂರಾರು ನಾಯಿಗಳು ನಿತ್ಯ ಸಂಚರಿಸುವ ಮೂಲಕ ಜನರ ಗಮನ ಸೆಳೆಯುತ್ತಿವೆ.

ಇಷ್ಟಕ್ಕೂ ನಾಯಿಗಳ ಓಡಾಟ ಏಕೆ ಅಂತಿರಾ..?

ವರ್ಷದುದ್ದಕ್ಕೂ ನಾಯಿಗಳು ಸಂತಾನೋತ್ಪತ್ತಿಯಲ್ಲಿ ತೊಡಗಿರುತ್ತವೆ. ಆದರೆ ಆಷಾಢ ಮಾಸ ಶುರುವಾಯಿತು ಎಂದರೆ ನಾಯಿಗಳ ಮಿಲನಮಹೋತ್ಸವಕ್ಕೆ ಹೇಳಿ ಮಾಡಿಸಿದ ಸಮಯ. ಹೀಗಾಗಿ ನಾಯಿಗಳ ಹಿಂಡು ಸೀಲ್​ಡೌನ್ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ABOUT THE AUTHOR

...view details