ಕೊಪ್ಪಳ: ಶಾಸಕರನ್ನೂ ಬಿಡದಂತಹ ಪುಂಡ-ಪೋಕರಿಗಳನ್ನು ಕಾಂಗ್ರೆಸ್ ಪಕ್ಷ ಬೆಳೆಸಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ದೂರಿದ್ದಾರೆ.
ಶಾಸಕರನ್ನೂ ಬಿಡದಂತಹ ಪುಂಡ-ಪೋಕರಿಗಳನ್ನು ಕಾಂಗ್ರೆಸ್ ಪಕ್ಷ ಬೆಳೆಸಿದೆ: ಡಿಸಿಎಂ ಕಾರಜೋಳ
ಸುಮಾರು 56 ವರ್ಷ ಕಾಂಗ್ರೆಸ್ ಪಕ್ಷ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಿಲ್ಲ. ಯಾರನ್ನೂ ಉದ್ಧಾರ ಮಾಡಿಲ್ಲ. ಸಂವಿಧಾನದ ಆಶಯದಂತೆ ದೀನ ದಲಿತರ ಉದ್ಧಾರ ಮಾಡಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ಮಾತನಾಡಿದ ಅವರು, ಸುಮಾರು 56 ವರ್ಷ ಕಾಂಗ್ರೆಸ್ ಪಕ್ಷ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಿಲ್ಲ. ಯಾರನ್ನೂ ಉದ್ಧಾರ ಮಾಡಿಲ್ಲ. ಸಂವಿಧಾನದ ಆಶಯದಂತೆ ದೀನ ದಲಿತರ ಉದ್ಧಾರ ಮಾಡಿಲ್ಲ. ಕಾಂಗ್ರೆಸ್ ಪಕ್ಷದ ಆಡಳಿತದ ಪಾಪದ ಫಲದಿಂದ ಇಂದು ಪುಂಡ-ಪೋಕರಿಗಳು ಮೆರೆಯುತ್ತಿದ್ದಾರೆ ಎಂದು ಆರೋಪಿಸಿದರು.
ಅಖಂಡ ಶ್ರೀನಿವಾಸಮೂರ್ತಿ ದಲಿತ ಅಥವಾ ಹಿಂದೂ ವ್ಯಾಖ್ಯಾನದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಬಸವಣ್ಣ ನಮಗೆ ಹೇಳಿದ್ದು ಒಂದೇ ಕುಲ. ಗಂಡು-ಹೆಣ್ಣು ಎಂಬುದು ಎರಡೇ ಜಾತಿ ಎಂದರು. ಇನ್ನು ಕೆ.ಜಿ.ಹಳ್ಳಿ, ಡಿ.ಜೆ. ಹಳ್ಳಿ ಗಲಭೆ ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದೆ. ತನಿಖೆಯ ವರದಿ ಬಂದ ನಂತರ ಆ ವರದಿ ಯಾರಿಗಾದರೂ ಅಪೂರ್ಣವೆನಿಸಿದರೆ, ಬೇರೆ ತನಿಖೆಗೆ ಒತ್ತಾಯಿಸಲಿ ಎಂದರು.