ಕುಷ್ಟಗಿ (ಕೊಪ್ಪಳ):ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಏಕಾಏಕಿ ಬೇಡಿಕೆ ಹೆಚ್ಚಾಗಿದ್ದು, ಖಾಸಗಿ ಅಂಗಡಿ ಹಾಗೂ ಸಹಕಾರ ಸಂಘಗಳಲ್ಲಿ ರೈತರು ಮುಗಿಬಿದ್ದು, ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಷ್ಟಗಿ: ಯೂರಿಯಾ ಗೊಬ್ಬರಕ್ಕೆ ಮುಗಿಬಿದ್ದ ರೈತರು! - Demand for urea
ದಾಸ್ತಾನು ಮಾಡಲು ಬಂದಿದ್ದ ಲಾರಿಯಿಂದಲೇ ರೈತರು ಯೂರಿಯಾ ಗೊಬ್ಬರ ಖರೀದಿಸಲು ಮುಂದಾಗಿದ್ದು ಕಂಡು ಬಂತು.
ಉತ್ತಮ ಮಳೆ ಹಿನ್ನೆಲೆ ತಾಲೂಕಿನಲ್ಲಿ ಯೂರಿಯಾಗೆ ಬೇಡಿಕೆ ಹೆಚ್ಚಾಗಿದೆ. ದಾಸ್ತಾನು ಖಾಲಿಯಾಗುವ ಆತಂಕದಿಂದಾಗಿ ರೈತರು ಮುಗಿಬಿದ್ದು ಯೂರಿಯಾ ಖರೀದಿಸುತ್ತಿದ್ದಾರೆ. ಇಲ್ಲಿನ ಲಕ್ಷ್ಮೀ ಅಗ್ರೋ ಕೇಂದ್ರದಲ್ಲಿ ದಾಸ್ತಾನು ಮಾಡಲು ಬಂದಿದ್ದ ಲಾರಿಯಿಂದಲೇ ರೈತರು ಯೂರಿಯಾ ಗೊಬ್ಬರ ಖರೀದಿಸಲು ಮುಂದಾಗಿದ್ದು ಕಂಡು ಬಂತು. ಗೊಬ್ಬರ ವಿಷಯವಾಗಿ ತೊಂದರೆಯಾಗುತ್ತಿದ್ದರೂ ಸಹ ಇಲಾಖೆ ಅಧಿಕಾರಿಗಳು ಗಮನಿಸದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಈ ಕುರಿತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ್ ಅವರು ಈ ಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಯೂರಿಯಾ ಗೊಬ್ಬರದ ಕೊರತೆ ಇಲ್ಲ. ಏಕಕಾಲಕ್ಕೆ ಬೇಡಿಕೆ ಹೆಚ್ಚಾಗಿದೆ. ಇಂದು 30 ಟನ್ ಬಂದಿದ್ದು, ನಾಳೆಯೂ 40 ಟನ್ ಯೂರಿಯಾ ಗೊಬ್ಬರ ಬರಲಿದೆ ಎಂದು ಮಾಹಿತಿ ನೀಡಿದರು.