ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ನಿರಂತರ ಮಳೆಗೆ ಬೀಜೋತ್ಪಾದನೆ ಹತ್ತಿ ಬೆಳೆ ಹಾಳಾಗಿದೆ.
ನಿರಂತರ ಮಳೆಗೆ ಹತ್ತಿ ಬೆಳೆ ಹಾನಿ: ಪರಿಹಾರಕ್ಕೆ ರೈತರ ಮೊರೆ
ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ನಿರಂತರ ಮಳೆಯಿಂದಾಗಿ ಬೀಜೋತ್ಪಾದನೆ ಹತ್ತಿ ಬೆಳೆ ಹಾಳಾಗಿದೆ.
ಗ್ರಾಮದ ರೈತ ಬಾಲಪ್ಪ ಸಾಹುಕಾರ, ಶಾಂತಕುಮಾರ ಜಾಲಿಹಾಳ, ರಮೇಶ ಸೇರಿದಂತೆ ಹತ್ತಾರು ಎಕರೆ ಪ್ರದೇಶದ ಹತ್ತಿ ಬೆಳೆ ನಿರಂತರ ಮಳೆಗೆ ಆಹುತಿಯಾಗಿದ್ದು, ಗಿಡದಲ್ಲಿ ಅರಳಿದ, ಅರಳುವ ಹಂತದ ಹತ್ತಿ ಗಿಡದಲ್ಲಿ ಕೊಳಿತಿದೆ. ಈ ಕುರಿತು ರೈತ ಶಾಂತಕುಮಾರ ಜಾಲಿಹಾಳ ಪ್ರತಿಕ್ರಿಯಿಸಿ, ಪ್ರತಿ ಗಿಡಕ್ಕೆ 60 ರಿಂದ 70 ರವರೆಗೆ ಕಾಯಿಗಳಿದ್ದು, ಮಳೆಗೆ ಎಲ್ಲವೂ ಹಾಳಾಗಿದೆ.
ಬರೋಬ್ಬರಿ ಒಟ್ಟಾರೆಯಾಗಿ 12 ಕ್ವಿಂಟಲ್ ನಿರೀಕ್ಷೆಯಲ್ಲಿದ್ದವರಿಗೆ 1 ಕ್ವಿಂಟಲ್ ಹತ್ತಿ ಇಳುವರಿ ಬರುವುದು ಅನುಮಾನವಾಗಿದ್ದು, ಕೃಷಿ ಇಲಾಖೆ ಕೂಡಲೇ ಆಗಮಿಸಿ, ಪರಿಶೀಲಿಸಿ ಹಾನಿಯ ಅಂದಾಜು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಪರಿಹಾರ ದೊರಕಿಸಿ ಕೊಡುವಂತೆ ರೈತರು ಆಗ್ರಹಿಸಿದ್ದಾರೆ.