ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಇನ್​​ಡೋರ್​​ ಸ್ಟೇಡಿಯಂ ನಿರ್ಮಾಣ: ಶಾಸಕ ಪರಣ್ಣ ಮುನವಳ್ಳಿ ಭೂಮಿ ಪೂಜೆ - ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

ಗಂಗಾವತಿಯಲ್ಲಿ ಪ್ರತ್ಯೇಕ ಶಟಲ್ ಬ್ಯಾಡ್ಮಿಂಟನ್ ಮತ್ತು ಶೆಟಲ್ ಕಾಕ್ ಪಂದ್ಯಾವಳಿಗೆ ಅನುಕೂಲ ಕಲ್ಪಿಸಲು, ಇನ್​​ಡೋರ್​​ ಸ್ಟೇಡಿಯಂ ನಿರ್ಮಿಸುವಂತೆ ಒತ್ತಾಯಿಸಲಾಗಿತ್ತು.

Construction of Indoor Stadium at Gangavathi
ಗಂಗಾವತಿಯಲ್ಲಿ ಇನ್​​ಡೋರ್​​ ಸ್ಟೇಡಿಯಂ ನಿರ್ಮಾಣ

By

Published : Mar 17, 2020, 10:23 AM IST

ಗಂಗಾವತಿ:ನಗರದ ತಾಲೂಕು ಕ್ರೀಡಾಂಗಣದಲ್ಲಿ ಇನ್​​ಡೋರ್​​ ಸ್ಟೇಡಿಯಂ ನಿರ್ಮಾಣ ಕಾಮಗಾರಿಗೆ, ಶಾಸಕ ಪರಣ್ಣ ಮುನವಳ್ಳಿ ಭೂಮಿ ಪೂಜೆ ನೆರವೇರಿಸಿದರು. ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಶಟಲ್ ಬ್ಯಾಡ್ಮಿಂಟನ್ ಮತ್ತು ಶೆಟಲ್ ಕಾಕ್ ಪಂದ್ಯಾವಳಿಗೆ ಅನುಕೂಲ ಕಲ್ಪಿಸಲು, ಇನ್​​ಡೋರ್​​ ಸ್ಟೇಡಿಯಂ ನಿರ್ಮಿಸುವಂತೆ ಒತ್ತಾಯಿಸಲಾಗಿತ್ತು.

ಗಂಗಾವತಿಯಲ್ಲಿ ಇನ್​​ಡೋರ್​​ ಸ್ಟೇಡಿಯಂ ನಿರ್ಮಾಣ

ಈ ಹಿನ್ನೆಲೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ, ಸ್ಟೇಡಿಯಂ ನಿರ್ಮಾಣಕ್ಕೆ ₹1.05 ಕೋಟಿ ಮೊತ್ತದ ಅನುದಾನ ಮಂಜೂರಾಗಿದೆ. ಇನ್ನು ಆರು ತಿಂಗಳೊಳಗೆ ಕಾಮಗಾರಿ ಮುಗಿಸಿಕೊಡುವಂತೆ ಶಾಸಕ ಪರಣ್ಣ ಮುನವಳ್ಳಿ, ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ABOUT THE AUTHOR

...view details