ಗಂಗಾವತಿ:ಜು.30ರಿಂದ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತಲೂ ಸಾರ್ವಜನಿಕರ ಓಡಾಟ ನಿಷೇಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ ಮಾಡಿದ್ದಾರೆ.
ಸಿಇಟಿ ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ: ಡಿಸಿ ಆದೇಶ
ಗಂಗಾವತಿಯಲ್ಲಿ ಜುಲೈ.30 ರಿಂದ ಎರಡು ದಿನಗಳ ಕಾಲ ಸಿಇಟಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತಲೂ ಸಾರ್ವಜನಿಕರ ಓಡಾಟ ನಿಷೇಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಆದೇಶ ಮಾಡಿದ್ದಾರೆ.
ಇಲ್ಲಿನ ಎಂಎನ್ಎಂ ಬಾಲಕಿಯರ ಮತ್ತು ಸರ್ಕಾರಿ ಜೂನಿಯರ್ ಬಾಲಕರ ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಸುತ್ತಲೂ ಬೆಳಗ್ಗೆ 08 ರಿಂದ ಸಂಜೆ 5 ಗಂಟೆವರೆಗೆ ಸುಮಾರು 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಸಾಮಾನ್ಯ ನಾಗರಿಕರು, ವಾಹನಗಳು ಓಡಾಡಾಬಾರದು. ಕೇಂದ್ರದೊಳಕ್ಕೆ ನಿಗದಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೊರತು ಪಡಿಸಿದರೆ ಯಾರೂ ಪ್ರವೇಶಿಸುವಂತಿಲ್ಲ.
ಅಲ್ಲದೇ ಕೇಂದ್ರದ ಸುತ್ತಲೂ ಯಾವುದೇ ರೀತಿಯ ಜೆರಾಕ್ಸ್ ಅಂಗಡಿ, ಟೈಪಿಂಗ್ ಸೆಂಟರ್, ಎಸ್ಟಿಡಿ ದೂರವಾಣಿ ಕೇಂದ್ರ, ಪೇಜರ್, ಮೊಬೈಲ್ ಮೊದಲಾದ ತಾಂತ್ರಿಕ ಮತ್ತು ನಕಲು ಮಾಡುವ ಪರಿಕರಗಳ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.