ಕೊಪ್ಪಳ: ಕೊಪ್ಪಳ ತಾಲೂಕಿನ ಕವಲೂರ ಗ್ರಾಮದಲ್ಲಿಂದು ಆಸ್ತಿಗಾಗಿನ ದಾಯಾದಿ ಕದನದಲ್ಲಿ ಅಣ್ಣನೊಬ್ಬ ತಮ್ಮನಿಗೆ ಗುಂಡು ಹಾರಿಸಿ ಕೊಲೆಗೈದಿದ್ದಾನೆ. ವಿನಾಯಕ ಎಂಬಾ ಮೃತ ಸೋದರನಾಗಿದ್ದಾನೆ.
ಕವಲೂರ ಗ್ರಾಮದ ಕವನ ಮನೋಹರ ದೇಸಾಯಿ ಎಂಬುವರಿಗೆ ಒಟ್ಟು 150 ಎಕರೆ ಜಮೀನು ಇದೆ. ಅವರಿಗೆ ರಾಘವೇಂದ್ರ ದೇಸಾಯಿ. ವಿನಾಯಕ ದೇಸಾಯಿ, ಯೋಗೀಶ್ ದೇಸಾಯಿ ಎಂಬ ಮೂವರು ಮಕ್ಕಳಿದ್ದರು. ಯೋಗೀಶ್ ಹಾಗೂ ವಿನಾಯಕ ಎಂಬುವರು ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಂದೆ ಕವಲೂರಿನಲ್ಲೇ ವಾಸವಾಗಿದ್ದಾರೆ.
ಈ ಮೂವರು ಮಕ್ಕಳ ಮಧ್ಯೆ ಆಸ್ತಿಗಾಗಿ ಆಗಾಗ ಜಗಳವಾಗುತ್ತಿತ್ತು. ಜಮೀನಿಗೆ ಸಂಬಂಧಿಸಿದಂತೆ ವಿವಾದವೊಂದು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ವಿಚಾರಣೆಯ ಹಂತದಲ್ಲಿದ್ದ ಈ ಜಮೀನಿನಲ್ಲಿ ಉಳುಮೆ ಮಾಡಬಾರದು ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ, ರಾಘವೇಂದ್ರ ಅವರು ಹೆಸರು ಬಿತ್ತನೆ ಮಾಡಿದ್ದರಿಂದ ಇನ್ನುಳಿದ ಇಬ್ಬರು ತಮ್ಮಂದಿರು ಸಿಟ್ಟಾಗಿದ್ದರು.