ಗಂಗಾವತಿ (ಕೊಪ್ಪಳ): ಕನಕಗಿರಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರ ಹೊಲಕ್ಕೆ ನುಗ್ಗುತ್ತಿರುವ ಕರಡಿಗಳು, ಕಲ್ಲಂಗಡಿ ಬೆಳೆ ನಾಶಪಡಿಸುತ್ತಿವೆ.
ಕರಡಿ ದಾಳಿ: ಬೀಜೋತ್ಪಾದನೆಗೆ ಬೆಳೆಸಲಾಗಿದ್ದ ಕಲ್ಲಂಗಡಿ ನಾಶ - ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ
ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಶರಣಪ್ಪ ವಕ್ರ ಎಂಬುವವರು ಬೀಜೋತ್ಪಾದನೆಯ ಉದ್ದೇಶಕ್ಕೆ ಬೆಳೆಸಿದ್ದ ಕಲ್ಲಂಗಡಿ ಬೆಳೆಯನ್ನು ಕರಡಿಗಳು ದಾಳಿ ನಡೆಸಿ ಸಂಪೂರ್ಣ ನಾಶಪಡಿಸಿವೆ.
ಕರಡಿ ದಾಳಿ: ಬೀಜೋತ್ಪಾದನೆಗೆ ಬೆಳೆಸಲಾಗಿದ್ದ ಕಲ್ಲಂಗಡಿ ಬೆಳೆ ನಾಶ
ಚಿಕ್ಕಮಾದಿನಾಳ ಗ್ರಾಮದ ಶರಣಪ್ಪ ವಕ್ರ ಎಂಬುವವರು ಬೀಜೋತ್ಪಾದನೆ ಉದ್ದೇಶಕ್ಕೆ ಬೆಳೆಸಲಾಗಿದ್ದ ಕಲ್ಲಂಗಡಿ ಬೆಳೆ ಮೇಲೆ ದಾಳಿ ಮಾಡಿರುವ ಕರಡಿಗಳು, ಬೆಳೆಯನ್ನ ಸಂಪೂರ್ಣ ನಾಶ ಮಾಡಿವೆ.
ಎರಡು ಎಕರೆ ಪ್ರದೇಶದಲ್ಲಿ ಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ, ಕರಡಿಗಳ ಹಾವಳಿಯಿಂದಾಗಿ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.