ಕುಷ್ಟಗಿ (ಕೊಪ್ಪಳ):ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ದಾಳಿ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ, ಭೋವಿ ಸಮಾಜದಿಂದ ಉಪ ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಶಾಸಕರ ನಿವಾಸದ ಮೇಲಿನ ದಾಳಿ....ಸಿಬಿಐ ತನಿಖೆಗೆ ಭೋವಿ ಸಮಾಜದಿಂದ ಆಗ್ರಹ - ಭೋವಿ ಸಮಾಜ ಲೆಟೆಸ್ಟ್ ನ್ಯೂಸ್
ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ದಾಳಿ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ, ಭೋವಿ ಸಮಾಜದಿಂದ ಉಪ ತಹಶೀಲ್ದಾರ್ ವಿಜಯಾ ಮುಂಡರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರಚೋಧಿತ ಗಲಭೆಯಲ್ಲಿ ಜನ ಪ್ರತಿನಿಧಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಜನ ರಕ್ಷಕರಾದ ಪೊಲೀಸರನ್ನು ಟಾರ್ಗೆಟ್ ಮಾಡಿದ್ದಾರೆ. ಹಿಂದುಳಿದ ಭೋವಿ ಸಮಾಜದವರಾದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಗುರಿಯಾಗಿಸಿಕೊಂಡು ಒಂದು ಕೋಮಿನ ಜನ ಮಾಡಿರುವ ದಾಳಿಯನ್ನು ಖಂಡಿಸುತ್ತೇವೆ.
ಈ ಪ್ರಕರಣನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಭೋವಿ ಸಮಾಜದ ಅಧ್ಯಕ್ಷ ಗೋವಿಂದ್ ವಡ್ಡರ್, ನಾಗರಾಜ ಭೋವಿ, ಶೇಖಪ್ಪ ಮ್ಯಾಗೇರಿ, ಯಂಕಪ್ಪ ಹಿರೇಮನಿ, ತಿಪ್ಪಣ್ಣ ಹಿರೇಮನಿ, ಹನಮಂತಪ್ಪ ಬಿಜಕಲ್, ಮುತ್ತಣ್ಣ ಅಮರಾವತಿ, ಈರಪ್ಪ ನಿಡಗುಂದಿ, ಮುತ್ತಣ್ಣ ಮ್ಯಾಗೇರಿ, ಶರಣಪ್ಪ ಬೋದೂರು, ಯಮನೂರ ಮತ್ತಿತರರು ಒತ್ತಾಯಿಸಿದರು.