ಕೊಪ್ಪಳ: ನಗರದ ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆರ್ಟಿಒ ಸಿಬ್ಬಂದಿ ಎಂದು ಹೇಳಿಕೊಂಡ ಕೆಲವರು ಹಗಲು ದರೋಡೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಾರಿ ಚಾಲಕರಿಂದ 50 ರಿಂದ 100 ರೂಪಾಯಿ ಟೋಕನ್ ವಸೂಲಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಕುರಿತು ಮಾಧ್ಯಮದವರು ವಿಡಿಯೋ ಮಾಡುವುದನ್ನು ಕಂಡು ಆರ್ಟಿಒ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿ, ಹಣದ ಬ್ಯಾಗ್ನೊಂದಿಗೆ ಓಡಿ ಹೋಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಕುಷ್ಟಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರ ಸುಲಿಗೆ: ಮಾಧ್ಯಮದವರನ್ನು ಕಂಡು ಓಟ! - allegation of daylight robbery in koppala
ಆರ್ಟಿಒ ವಿಭಾಗದ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಗಳು ಕುಷ್ಟಗಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಣದ ಬ್ಯಾಗ್ನೊಂದಿಗೆ ವ್ಯಕ್ತಿ ಓಟ
Last Updated : Dec 9, 2022, 6:10 PM IST