ಕುಷ್ಟಗಿ (ಕೊಪ್ಪಳ): ಪಟ್ಟಣದ ಹೊರವಲಯದ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಹೆದ್ದಾರಿ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು - ಕುಷ್ಟಗಿ ಕೊಪ್ಪಳ ಲೆಟೆಸ್ಟ್ ನ್ಯೂಸ್
ಸೋಮವಾರ ರಾತ್ರಿ ಶಂಸುದ್ದೀನ್ ಖಾದೀರಸಾಬ್ ಹಾವಾಡಿಗ(35) ಎಂಬುವವರು ಸಂತ ಶಿಶುನಾಳ ಷರೀಫ್ ನಗರಕ್ಕೆ ಬುತ್ತಿ ಬಸವೇಶ್ವರ ನಗರದಿಂದ ಹೆದ್ದಾರಿ ಕ್ರಾಸ್ ಮಾಡುವ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಷ್ಟಗಿ: ಹೆದ್ದಾರಿ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿ, ಪಾದಚಾರಿ ಸಾವು!
ಪಟ್ಟಣದ ಸಂತ ಶಿಶುನಾಳ ಷರೀಫ್ ನಗರದ ನಿವಾಸಿ ಶಂಸುದ್ದೀನ್ ಖಾದೀರಸಾಬ್ ಹಾವಾಡಿಗ(35) ಮೃತ ವ್ಯಕ್ತಿ. ಈತ ಸಂತ ಶಿಶುನಾಳ ಷರೀಫ್ ನಗರಕ್ಕೆ ಬುತ್ತಿ ಬಸವೇಶ್ವರ ನಗರದಿಂದ ಹೆದ್ದಾರಿ ಕ್ರಾಸ್ ಮಾಡುವ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ಶಂಸುದ್ದೀನ್ ಮೇಲೆ ಹರಿದ ಪರಿಣಾಮ ಆತ ಕೊನೆಯುಸಿರೆಳೆದಿದ್ದಾನೆ. ಸದ್ಯ ಈ ಕುರಿತು ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.