ಕುಷ್ಟಗಿ (ಕೊಪ್ಪಳ):ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿ ಕಂಬಿ ಹಿಂದೆ ತಳ್ಳಿರುವ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ.
ಅಪ್ರಾಪ್ತೆ ಮೇಲೆ ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ - ಅತ್ಯಾಚಾರ
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನ ಕುಷ್ಟಗಿ ಪೊಲೀಸರು ಬಂಧಿಸಿದ್ದು, ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಗುಂಡೇಶ ಗೌಂಡಿ ಬಂಧಿತ ಆರೋಪಿ. ಗ್ರಾಮದ ಕಿರಾಣಿ ಅಂಗಡಿಗೆ ಆಗಾಗ ಹೋಗಿ ಅಪ್ರಾಪ್ತೆಯನ್ನು ಸಲುಗೆಯಿಂದ ಮಾತನಾಡಿಸಿ, ಸಂಗಮೇಶ ಅಲಿಯಾಸ್ ಗುಂಡೇಶ ಗೌಂಡಿ ಪರಿಚಿತನಾಗಿದ್ದ. ಅ. 3ರಂದು ಬಾಲಕಿ ಮಧ್ಯಾಹ್ನದ ವೇಳೆ ಬಹಿರ್ದೆಸೆಗೆ ಹೋದಾಗ ಬೈಕ್‌ನಲ್ಲಿ ಬಂದ ಸಂಗಮೇಶ ಬಲವಂತವಾಗಿ ಹೊಲಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿ ಅಲ್ಲಿಯೇ ಬಿಟ್ಟು ಹೋಗಿದ್ದ ಎನ್ನಲಾಗಿದೆ.
ನಂತರ ತಡರಾತ್ರಿ ಮನೆಗೆ ವಾಪಸಾದ ಬಾಲಕಿ ನಡೆದ ವಿಷಯ ಹೇಳಿದಾಗ ಸೆ. 4ರಂದು ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿ ಸಂಗಮೇಶ ಗೌಂಡಿಯನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಲಾಗಿದ್ದು, ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.