ಕರ್ನಾಟಕ

karnataka

ETV Bharat / state

ಪ್ರಿಯತಮೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಕೊರಳೊಡ್ಡಿದ ವ್ಯಕ್ತಿ - A man committed suicide alleging harassment by lover

ಗಂಗಾವತಿ ತಾಲೂಕಿನ ಮರಳಿ ಗ್ರಾಮದಲ್ಲಿ ಪ್ರಿಯತಮೆ ನೀಡುತ್ತಿದ್ದ ಕಿರಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

police
ಪೊಲೀಸ್​ ಠಾಣೆ

By

Published : Sep 15, 2021, 12:28 PM IST

ಗಂಗಾವತಿ: ಪ್ರಿಯತಮೆ ನೀಡುತ್ತಿದ್ದ ನಿರಂತರ ಕಿರಕುಳ ಹಾಗೂ ಹಣದ ಬೇಡಿಕೆಗೆ ಬೇಸತ್ತು ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮರಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡಬಸಪ್ಪ ಗುಂಡಪ್ಪ ಅಳ್ಳಳ್ಳಿ (48) ಮೃತ ವ್ಯಕ್ತಿ. ಗುಂಡಪ್ಪನ ಪತ್ನಿ ಶಂಕುತಲಮ್ಮ ಅನಾರೋಗ್ಯದ ಹಿನ್ನೆಲೆ 2016 ರಲ್ಲಿ ಸಾವನ್ನಪ್ಪಿದ್ದಾರೆ. ಬಳಿಕ ಈತ ನರಸಾಪುರ ಸಮೀಪದ ಹೆಬ್ಬಾಳ ಕ್ಯಾಂಪಿನ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ಹಿಂದೆ ಕೂಡ ಮಹಿಳೆ ಕಿರುಕುಳ ನೀಡಿ, ಗುಂಡಪ್ಪನ ಬಳಿ ಸಾಕಷ್ಟು ಹಣ ಕಿತ್ತುಕೊಂಡಿದ್ದಾಳೆ ಎನ್ನಲಾಗಿದೆ.

ಕಳೆದ ಕೆಲ ದಿನಗಳಿಂದ ಪ್ರಿಯತಮೆ ನೀಡುತ್ತಿದ್ದ ಕಿರುಕುಳವನ್ನು ದೊಡ್ಡಬಸಪ್ಪ ಗುಂಡಪ್ಪ ನನ್ನ ಬಳಿ ಹೇಳುತ್ತಿದ್ದ ಎಂದು ಮೃತನ ಸಂಬಂಧಿ ಕಾರಟಗಿಯ ಶರಣಪ್ಪ ಮಲ್ಲಪ್ಪ (37) ಗ್ರಾಮೀಣ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details