ಕೊಪ್ಪಳ:ಜಿಲ್ಲೆಯಲ್ಲಿಂದು 239 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,251 ಕ್ಕೆ ಏರಿಕೆಯಾಗಿದೆ.
ಗಂಗಾವತಿ ತಾಲೂಕಿನಲ್ಲಿ 86, ಕೊಪ್ಪಳ 79, ಕುಷ್ಟಗಿ 44 ಹಾಗೂ ಯಲಬುರ್ಗಾದಲ್ಲಿ 30 ಪ್ರಕರಣಗಳು ವರದಿಯಾಗಿದೆ.
ಕೊಪ್ಪಳ:ಜಿಲ್ಲೆಯಲ್ಲಿಂದು 239 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 6,251 ಕ್ಕೆ ಏರಿಕೆಯಾಗಿದೆ.
ಗಂಗಾವತಿ ತಾಲೂಕಿನಲ್ಲಿ 86, ಕೊಪ್ಪಳ 79, ಕುಷ್ಟಗಿ 44 ಹಾಗೂ ಯಲಬುರ್ಗಾದಲ್ಲಿ 30 ಪ್ರಕರಣಗಳು ವರದಿಯಾಗಿದೆ.
ಓರ್ವ ಸೋಂಕಿತ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಒಟ್ಟು 140 ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಇಂದು 109 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 4,495 ಜನರು ಗುಣಮುಖರಾಗಿದ್ದಾರೆ.
ಸದ್ಯ 1,357 ಜನ ಸೋಂಕಿತರನ್ನು ಹೋಂ ಐಸೊಲೇಷನ್ ಮಾಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದ್ದಾರೆ.