ಕೋಲಾರ:ಟ್ರಾಲಿ ಯಂತ್ರ ಪಲ್ಟಿಯಾದ ಪರಿಣಾಮ ಯಂತ್ರದಡಿ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಕೂರಂಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಟ್ರಾಲಿ ಯಂತ್ರ ಪಲ್ಟಿಯಾಗಿ ಕಾರ್ಮಿಕ ಸಾವು - kannadanews
ಟ್ರಾಲಿಯೊಂದು ಪಲ್ಟಿಯಾದ ಪರಿಣಾಮ ಕಾರ್ಮಿಕ ಸಾವು- ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ.
ಕಾರ್ಮಿಕ ಸಾವು
ಬಂಗಾರಪೇಟೆ ತಾಲೂಕಿನ ಡಿ.ಕೆ. ಹಳ್ಳಿ ನಿವಾಸಿ ಮಂಜುನಾಥ್ (40) ಎಂಬ ಕಾರ್ಮಿಕ ಸಾವನ್ನಪ್ಪಿದ್ದಾರೆ.
ಮಾಲೂರಿನ ಮೈಕ್ರಾನ್ ಎಲೆಕ್ಟ್ರಾನಿಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಟ್ರಾಲಿ ಯಂತ್ರ ಪಲ್ಟಿಯಾದ ಪರಿಣಾಮ ಮಂಜುನಾಥ್ ಯಂತ್ರದಡಿ ಸಿಲುಕಿ ಮೃತಪಟ್ಟಿದ್ದಾರೆ. ಮಾಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
Last Updated : May 5, 2019, 5:59 PM IST